ರಾಜ್ಯಸಭೆಯಲ್ಲಿ ಅವಕಾಶ ಸಿಕ್ಕರೆ ಅಂಗವಿಕಲರ ಧ್ವನಿಯಾಗುವೆ

28 MANJU 04
Published on

ಹೊಸಪೇಟೆ: ಜೀವನ ಅನೇಕ ಅನುಭವನಗಳನ್ನು ನೀಡುತ್ತದೆ. ಇಂತಹ ಅನುಭವಗಳನ್ನು ಅರಿತು ರೋಟರಿ ಸಂಸ್ಥೆ ದೇಶದಲ್ಲಿ ಸೇವೆ ನೀಡುತ್ತ ಬಂದಿದೆ ಎಂದು ಪದ್ಮಶ್ರೀ ಕೆ.ಎಸ್.ರಾಜಣ್ಣ ಹೇಳಿದರು.

ನಗರದ ರೋಟರಿ ಕ್ಲಬ್ ಆವರಣದಲ್ಲಿ ಶನಿವಾರ ನಡೆದ ಉಮಾಮಹೇಶ್ವರ ರಾವು ಬ್ಲಡ್ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಅನುದಾನವನ್ನು ಸದುಪಯೋಗ ಮಾಡಿಕೊಂಡು ಸಮಾಜದ ಸೇವೆಯಲ್ಲಿ ತೊಡಗಿಸಬೇಕು. ಇನ್ನೂ ಹೆಚ್ಚಿನ ಜನರಿಗೆ ಅವಶ್ಯಕ ಆರೋಗ್ಯ ಸೇವೆ ಒದಗಿಸಬೇಕು. ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು. ಮನುಷ್ಯನನ್ನು ಬದುಕಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ರಕ್ತ. ರಕ್ತಾ ದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದರು

ನಮ್ಮ ಸಾಧನೆಗೆ ಮತ್ತು ಸಮಾಜಸೇವೆಗೆ ಅಂಗವೈಫಲ್ಯ ಕಾರಣವಲ್ಲ. ಸಮಾಜದಲ್ಲಿ ಮಾನವೀಯತೆ ಮುಖ್ಯ. ಅಂಗವಿಕಲರು ಹುಟ್ಟಿದ ಕ್ಷಣ ತೊಟ್ಟಿಗೆ ಬಿಸಾಕುವ ಜನತಿದ್ದಾರೆ. ಆ ಕೆಲಸ ಯಾರುಕೂ ಮಾಡಬಾರದು. ಸಮಾಜದಲ್ಲಿ ಮಾನವೀಯತೆ ಮುಖ್ಯ. ಸಮಾಜವಾಗಲಿ, ಸರ್ಕಾರವಾಗಲಿ ಅಂಗವಿಕಲರಿಗೆ ಅನುಕಂಬದ ಬದಲು ಅವಕಾಶ ನೀಡಲಿ ಎಂದು.

ನನಗೆ ಮುಖ್ಯಂತ್ರಿ ಸಿದ್ದರಾಮಯ್ಯ ಜೀವಕೊಟ್ಟರೂ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನ ಕೊಟ್ಟರು. ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಅವಕಾಶ ಸಿಕ್ಕರೆ ಅಂಗವಿಕಲ ಕಲ್ಯಾಣಕ್ಕಾಗಿ ಧ್ವನಿ ಎತ್ತುವ ಕೆಲಸ ಮಾಡುವೆ ಎಂದರು.

ಸಂಸದ ಈ.ತುಕಾರಾಂ, ಶಾಸಕರಾದ ಅನ್ನಪೂರ್ಣ ತುಕಾರಾಮ್, ಎಚ್.ಆರ್.ಗವಿಯಪ್ಪ, ಡಿಎಚ್.ಒ ಶಂಕರ್ ನಾಯ್ಕ, ರೋಟರಿ ಅಧ್ಯಕ್ಷ ದೀಪಕ್, ಪ್ರಮುಖರಾದ ಸಾದುಗೋಪಾಲಕೃಷ್ಣ, ವೈ.ಶ್ರೀನಿವಾಸ್, ಎಂ.ಕೆ.ರವೀAದ್ರ, ಗೋಪಿನಾಥ, ವೀರಭದ್ರ, ಅಬ್ದುಲ್ ಹಕ್ ಸೇಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net