ಸಿಎಂ ಬದಲಾವಣೆ ಬಿಜೆಪಿಯರ ತಿರುಕನ ಕನಸು

BLY-25-2-BE.tukaram
Published on

ಹೊಸಪೇಟೆ: ಮುಡಾ ಕೇಸ್ ನಲ್ಲಿ ಸಿಎಂಗೆ ಹೈಕೋರ್ಟ್ ನಿಂದ ನ್ಯಾಯಾ ಸಿಕ್ಕಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.

ನಗರದಲ್ಲಿ ಶನಿವಾರ ಸಿಎಂ ಇನ್ನು ಅಪರಾಧ ಮುಕ್ತರಾಗಿಲ್ಲವೆಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅವರು ನಮ್ಮ ಸಿಎಂ ಹಾಗೂ ಸರ್ಕಾರದ ಮೇಲೆ ಅಪವಾದ ಮಾಡೋ ಮೂಲಕ ಕಪ್ಪು ಚುಕ್ಕೆ ತರಲು ಯತ್ನಿಸಿದರು. ಅದಕ್ಕೆ ಇವತ್ತು ನ್ಯಾಯಾಂಗ ದೇಗುಲದಲ್ಲಿಯೇ ಉತ್ತರ ಸಿಕ್ಕಿದೆ ಎಂದರು.

ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಂಪಿ, ಬಿಜೆಪಿಯವರು ಯಾವಾಗಲೂ ತಿರುಕನ ಕನಸು ಕಾಣ್ತಾನೆ ಇದ್ದಾರೆ. 2ನೇ ದೇವರಾಜ ಅರಸು ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಐದು ವರ್ಷ ಪೂರ್ಣವಧಿ ಪೂರೈಸ್ತಾರಾ ಎನ್ನೋ ಪ್ರಶ್ನೆಗೆ ಉತ್ತರಿಸಿದ ಸಂಸದ, ನಮ್ಮ ಪಕ್ಷದ ನಾಯಕರೂ ಸೇರಿ ನಾವೆಲ್ಲರೂ ಐದು ವರ್ಷ ಸರ್ಕಾರ ನಡೆಸುತ್ತೇವೆ ಎಂದು ಹೇಳಿ ನಯವಾಗಿ ಜಾರಿಕೊಂಡರು. ಬೀಡದೇ ಪ್ರಶ್ನಿಸಿದ ಸುದ್ದಿಗಾರರಿಗೆ ಉತ್ತರಿಸದೇ ಸುಮ್ಮನಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net