

ಹೊಸಪೇಟೆ: ದೇಶದಲ್ಲಿ ಅಕ್ರಮ ವಲಸಿಗರು ಇದ್ದಾರೆ ಎಂಬ ಸಾಕಿ ಇತ್ತೀಚಿನ ಕಾಶ್ಮೀರ ದಾಳಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ವಲಸಿಗರು ರಾಜ್ಯ ಸೇರಿದಂತೆ ದೇಶದಲ್ಲಿ ಇದ್ದಾರೆ ಎನ್ನುವುದಕ್ಕೆ ಇತ್ತೀಚಿಗೆ ನಡೆದ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಸಾಕ್ಷಿ. ಅನೇಕರು ಬಂದು ನೆಲಸಿರುವುದಕ್ಕೂ ಆಧಾರಗಳಿವೆ ಅವರನ್ನು ಗಡಿಪಾರು ಮಾಡಬೇಕಿದೆ. ಇನ್ನೂ ಜನ ಆಕ್ರೋಶ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ನೇತೃತೃವದ್ದಲ್ಲಿ ವಿಜಯನಗರದ ನಡೆಯಬೇಕಿದ್ದ ಜನಾಕ್ರೋಶ ಯಾತ್ರ ಕಾಶ್ಮೀರ ದಾಳಿಯಿಂದ ರದ್ದು ಮಾಡಲಾಯಿತು. ಎರಡನೇ ಹಂತದಲ್ಲಿ ಮೇ 09ರ ಸಂಜೆ ಯಾತ್ರೆ ನಡೆಸಲು ತಿರ್ಮಾನ ಮಾಡಲಾಗಿದೆ. ರಾಜ್ಯ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಓಬಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಮಾತನಾಡಿ, ದೇಶದ ಇಷ್ಟು ವರ್ಷಗಳ ನಂತರ ಸದ್ಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ. ಆರ್ಥಿಕ ದುರ್ಬಲ ವರ್ಗಗಳ ಸಮಗ್ರ ಪ್ರಗತಿಗೆ ಈ ಜಾತಿಯ ಗಣತಿ ಸಹಕಾರಿಯಾಗಲಿದೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಜಾತಿಯ ಗಣತಿ ಮಾಡುವುದಾಗಿ ಹೇಳಿ 10 ವರ್ಷ ಕಾಲಹರಣ ಮಾಡಿದೆ. ಈಗ ಜಾತಿಯ ಗಣತಿಗೆ ಮುಂದಾಗಿದ್ದು, ಅನೇಕ ಗೊಂದಲಗಳ ಆಗರವಾಗಿದೆ. ಅಲ್ಲದೆ ಸ್ವಪಕ್ಷೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರದ ಈ ಜಾತಿಯ ಗಣತಿ ಪರಿಹಾರವಾಗಲಿದೆ 90 ವರ್ಷಗಳ ನಂತರ ಜಾತಿಗಣತಿಗೆ ಮುಂದಾದ ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರ ಐತಿಹಾಸಿಕ ಎಂದರು.
ಜಿಲ್ಲಾ ವಕ್ತಾರ ಅಶೋಕ ಜೀರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ಮಹೇಶ, ಅನುರಾಧಾ ಸುದ್ಧಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.