

ಹೊಸಪೇಟೆ: ದೇಶವನ್ನು ಸಮೃದ್ಧ ರಾಷ್ಟ್ರವಾಗಿಸುವ ಉದ್ದೇಶದಿಂದ ಬಿಜೆಪಿ ಸ್ಥಾಪನೆ ಆಗಿದ್ದು, ಇಂದು ವಿಶ್ವದ ಬಹುದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಹೇಳಿದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನವಾರ ಬಿಜೆಪಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಕೆಲವು ಪಕ್ಷಗಳಿಂದ ದೇಶ ಅಧೋಗತಿಗೆ ತಲುಪುವ ಸ್ಥಿತಿಯಲ್ಲಿತ್ತು. ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ, ಲಾಲಕೃಷ್ಣ ಅಡ್ವಾಣಿ,ಸುಷ್ಮಾ ಸ್ವರಾಜ, ನರೇಂದ್ರ ಮೋದಿ, ಅನಂತಕುಮಾರ ಅವರಂತಹ ಮಹಾನ್ ನಾಯಕರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂತು. ರಾಷ್ಟ್ರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಉತ್ತಮ ಹಾದಿಯತ್ತ ಕೊಡೊಯ್ಯುತ್ತಿದ್ದಾರೆ ಎಂದರು.