

ಹೊಸಪೇಟೆ : ಇಂಜಿನಿಯರ್ಸ್ ದಿನಾಚರಣೆ ನಿಮಿತ್ತ ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಬಿಲ್ ಟೆಕ್ ಎಕ್ಸಿಬಿಷನ್ ಭಾನುವಾರ ಸಮಾರೋಪ ಸಮಾರಂಭ ನಡೆಯಿತು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಧ್ಯಕ್ಷ ಶ್ರೀಪಾದ್ ಭೋಪಾಲ್ ಮಾತನಾಡಿ, ಬಿಲ್ ಟೆಕ್ ಎಕ್ಸಿಬಿಷನ್ ಆ ಯೋಜನೆ ಹೊಸಪೇಟೆ ಮತ್ತು ಸುತ್ತಮುತ್ತಲಿನ ಜನರಿಂದ ಉತ್ತನ ಜನಸ್ಪಂದನೇ ಸಿಕ್ಕಿದೆ. ಅಭೂತಪೂರ್ವ ಯಶಸ್ಸನ್ನು ಕೂಡ ಕಂಡಿದೆ. ಸುಮಾರು 25 ಸಾವಿರ ಕಿಂತಲು ಹೆಚ್ಚು ಜನರು ಭೇಟಿ ನೀಡಿ ಕಟ್ಟಡಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆದರು. ಬೆಂಗಳೂರು ಮುಂಬೈ ಅಂತಹ ಮಹಾನಗರಗಳಲ್ಲಿ ನಡೆಯುವ ರೀತಿಯಲ್ಲಿ ಹೊಸಪೇಟೆ ಬಿಲ್ಟೆಕ್ ಪ್ರದರ್ಶನಗೊಂಡಿದೆ ಎಂದರು.
ಯುವ ಮುಖಂಡ ಸಿದ್ದಾರ್ಥ್ ಸಿಂಗ್ ಮಾತನಾಡಿ, ಇಂಜಿನಿಯರ್ ಗಳು ಕೇವಲ ಕಟ್ಟಡವನ್ನು ಕಟ್ಟುವುದಲ್ಲ ನಮ್ಮ ಸೊಸೈಟಿಯನ್ನು ಕಟ್ಟುತ್ತಾರೆ ಎಂದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಬಿಲ್ಡ್ಟೆಕ್ ಆಯೋಜಕ ಉಮಾಪತಿ, ಅಸೋಸಿಯೇಷನ್ ಉಪಾಧ್ಯಕ್ಷ ರಾಮ ಜೋಶಿ, ಪ್ರಮುಖರಾದ ಡಿ.ಚಂದ್ರಶೇಖರ, ಅರುಣ್ ತೆಗ್ಗಿ ಗವಿಸಿದ್ದಯ್ಯ, ಅರುಣ್ ಕುಮಾರ ರಾಯಬಾಗಿ, ಗಣೇಶ್, ವೇಣುಗೋಪಾಲ್, ಕಲ್ಮೇಶ್ ತೋಟದ ಇತರರಿದ್ದರು.