ಹಂಪಿಯಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿ

27 MANJU 01
Published on

ಹೊಸಪೇಟೆ: ಬೈಕ್ ಟ್ಯಾಕ್ಸಿ ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನೇತೃತ್ವದಲ್ಲಿ ಆಟೋ ಚಾಲಕರಿಂದ ಹಂಪಿಯಿAದ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ವರೆಗೆ ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಯಿತು.

ಹಂಪಿ, ಕಮಲಾಪುರ ಮತ್ತು ಕಡ್ಡಿರಾಂಪುರ ಭಾಗದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಗಳು ನೊಂದಣಿ ಇಲ್ಲದೇ ಬಾಡಿಗೆಗೆ ನೀಡುತ್ತಿದ್ದಾರೆ. ಕಚೇರಿಯ ಕೇಂದ್ರ ಸ್ಥಾನವನ್ನು ಬದಲಾಯಿಸಲು ಅವಕಾಶವಿಲ್ಲ. ಆದರೂ, ನಿಯಮ ಉಲ್ಲಂಘಿಸಿ ಫ್ರಾನ್ಸಿಸಿ ಹೆಸರಿನಲ್ಲಿ ನಿಯಮ ಮೀರಿ ಬಾಡಿಗೆ ನೀಡಲಾಗುತ್ತಿದ್ದೆ. ಈ ಬಗ್ಗೆ ಹಲವು ಬಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.

ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ 1997 ರ ಪ್ರಕಾರ ಶರತ್ತುಗಳು ಉಲ್ಲಂಘನೆಯಾಗಿದೆ. ಆದ್ದರಿಂದ ಖಾಸಗಿ ಕಂಪನಿಯ ವಾಹನಗಳಿಗೆ ನೀಡಿರುವ ಪರವಾನಿಗೆ ಹಾಗೂ ಕಂಪನಿಗೆ ನೀಡಿರುವ ಟ್ರೇಡ್ ಲೈಸೆನ್ಸ್ ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಹಂಪಿ ಪ್ರಾಧಿಕಾರದ ನಿಯಮದ ಪ್ರಕಾರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್ ನಡೆಸಲು ಅವಕಾಶ ಇರುವುದಿಲ್ಲ. ಆದರೂ ನಿಯಮಗಳನ್ನು ಉಲ್ಲಂಘಿಸಿ ಹಂಪಿ ಸುತ್ತಮುತ್ತ, ಅದರಲ್ಲೂ ವಿರುಪಾಕ್ಷೇಶ್ವರ ದೇಗುಲ ಬಳಿ ಗ್ಯಾರೇಜ್ ಇದೆ. ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರ ಮತ್ತು ಇಲಾಖೆಗೆ ತಪ್ಪು ಮಾಹಿತಿ ನೀಡಿರುತ್ತಾರೆ. ಇದಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿಗಳು ಸಹ ಭಾಗಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಹೋಟೆಲ್, ರೆಸಾರ್ಟ್ಗಳು , ಹೋಂ ಸ್ಟೇ ಗಳ ಮಾಲೀಕರು ಮತ್ತು ಇನ್ನು ಕೆಲವರು ಅನಧಿಕೃತವಾಗಿ ಸ್ವಂತಕ್ಕೆ ಬಳಸುವ ದ್ವಿಚಕ್ರವಾಹನಗಳನ್ನು ಮತ್ತು ಬೆಂಗಳೂರು ಮೂಲದ ಕಂಪನಿಗಳ ದ್ವಿಚಕ್ರ ವಾಹನಗಳನ್ನು ವಿದೇಶಿ ಮತ್ತು ಸ್ವದೇಶಿ ಪ್ರವಾಸಗಳಿಗೆ ಬಾಡಿಗೆಗೆ ನೀಡುತ್ತಿರುವುದು ಕಂಡುಬAದಿರುತ್ತದೆ. ಹಂಪಿ ಪ್ರದೇಶದಲ್ಲಿ ಅನಧಿಕೃತವಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಎಫ್‌ಕೆಎಆರ್‌ಡಿಯು ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಎಂ.ಸAತೋಷ್ ಕುಮಾರ್, ಪ್ರಮುಖರಾದ ವೈ.ರಾಮಚಂದ್ರ ಬಾಬು, ಎಸ್.ಅನಂತಶಯನ, ರಾಘವೇಂದ್ರ, ಪ್ರಕಾಶ್ ಬಾಬು, ವಿರೂಪಾಕ್ಷಗೌಡ, ಗೋವಿಂದ, ಬಿ.ಎಸ್.ರುದ್ರಪ್ಪ, ಅಶೋಕ್, ಎಂ.ಸುಭಾಷ್, ಎಸ್.ತಿಪ್ಪೇಸ್ವಾಮಿ, ಎಸ್.ವಿಜಯ್ ಕುಮಾರ್, ತಿಪ್ಪೇಸ್ವಾಮಿ, ಹನುಮ ನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net