

ಹೊಸಪೇಟೆ: ಶ್ರೀ ಗೌರಿ ಸುಂಕಲಮ್ಮ ದೇವಿ ಸೇವಾ ಟ್ರಸ್ಟ್ ಉತ್ಸವ ಸಮಿತಿಯಿಂದ ನಗರದ ಕಾರಿಗನೂರಿನ ಅಂಬೇಡ್ಕರ್ ನಗರದಲ್ಲಿ ನಡೆದ ಶ್ರೀ ಗೌರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಜರುಗಿತು.
ಹುಡಾ ಅಧ್ಯಕ್ಷ ಎಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ದೇಶ ಸಂಸ್ಕೃತಿ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ಪ್ರತಿಯೊಬ್ಬರು ಗೌರವ ಕೊಡುವ ಉದ್ದೇಶದಿಂದ ಹಲವಾರು ಆಚರಣೆಗಳನ್ನು ನೆಡೆಸಿಕೊಂಡು ಬಂದಿರುತ್ತೇವೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳನ್ನು ಸಿಂಗಾರ ಮಾಡುವ ಮೂಲಕ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗುತ್ತದೆ. ಹಬ್ಬದ ಆಚಾರ ವಿಚಾರಗಳು ಮುಂದಿನ ತಲೆಮಾರಿಗೆ ಹೊತ್ತು ಸಾಗುವ ಗೌರಿ ಹಬ್ಬ ವಿಶೇಷ ಎಂದರು.
ಗೌರಿ ಹುಣ್ಣಿಮೆಯಂದು ಗೌರಿ ಮಕ್ಕಳು ಕಳಸಬೇಳಗುವುದರೊಂದಿಗೆ ಸಡಗರ ಸಂಭ್ರಮದಿAದ ಆಚರಣೆ ಮಾಡುತ್ತಾರೆ. ಭಾನುವಾರ ಬೆಳಗಿನ ಜಾವದಲ್ಲಿ ಹೆಣ್ಣು ಮಕ್ಕಳು ಕಳಸ ಬೆಳಗಿದರು. ಯುವಕರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. ನಂತರ ಗೌರಿದೇವಿಯನ್ನು ವಿಸರ್ಜನೆ ಮಾಡಿದರು.
ಪ್ರಮುಖರಾದ ಎಸ್.ಎರ್ರಿಸ್ವಾಮಿ, ವಡ್ಡಟ್ಟಿ ಸುಂಕಪ್ಪ, ಹುಲುಗಪ್ಪ, ರಾಮಣ್ಣ, ಭರತ್, ನಾಗರಾಜ, ಪ್ರವೀಣ, ಹನುಮಂತ, ಆಂಜನೇಯ, ರಾಮಾಂಜನಿ, ಹುಲುಗಪ್ಪ, ಗಿಡ್ಡ ಬಸವ, ತಿಮ್ಮಣ್ಣ ಇತರರಿದ್ದರು.