ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ ಸಾಧ್ಯ

18 HPT 2
Published on

ಹೊಸಪೇಟೆ: ನಾವೆಲ್ಲರೂ ಅಹಂಕಾರ ತ್ಯಜಿಸಿ, ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಹಂಸಾಂಬ ಶಾರದಾಶ್ರಮದ ನೂತನ ನಿವೇಶನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯರಲ್ಲಿ ಸೇವಾ ಮನೋಭಾವ, ತ್ಯಾಗಗುಣ ರಕ್ತಗತವಾಗಿ ಬಂದಿದೆ. ಆದರೆ, ಕೊಂಚ ಅಹಂ ಇದೆ. ನಾವೆಲ್ಲರೂ ಅಂಹಕಾರ ತ್ಯಾಗ ಮಾಡಬೇಕಿದೆ. ಸತ್ಸಂಗಗಳಲ್ಲಿ ಭಾಗವಹಿಸುವ ಮೂಲಕ ಆಧ್ಯಾತ್ಮಿಕ ಚಿಂತನೆ, ಭಕ್ತಿ ಮಾರ್ಗದಲ್ಲಿ ನಡೆಯಬಹುದು. ಇದರಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದು ಹೇಳಿದರು.

ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಮುಂದಿನ ದಿನದಲ್ಲಿ ಹಸಾಂಭ ಶಾರದಾಶ್ರಮದಲ್ಲಿ ಶಾಲೆ ತೆರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಎಲ್ಲಾ ಸಹಕಾರವನ್ನು ತಾವು ಮಾಡುವುದಾಗಿ ಭರವಸೆ ನೀಡಿದ ಅವರು, ಆಶ್ರಮಕ್ಕೆ ವಯಕ್ತಿಕ ಐದು ಲಕ್ಷ ರೂ ದೇಣಿಗೆ ಘೋಷಿಸಿದರು.

ನಿರ್ಭಯಾನಂದ ಸ್ವಾಮಿಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಪಾಠ ಕಲಿಸಬೇಕಿದೆ. ಅವರಿಗೆ ಕಷ್ಷಗಳನ್ನು ಸಹಿಸುವ ಟ್ರೆöÊನಿಂಗ್ ನೀಡಬೇಕಿದೆ. ಅವರು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುವ ರೀತಿಯಲ್ಲಿ ಅವರಿಗೆ ತರಬೇತಿ ನೀಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಜಾಗದಲ್ಲಿ ತಲೆ ಎತ್ತಲಿರುವ ಹಸಾಂಭ ಶಾರದಾಶ್ರದಮ ಬಹುದೊಡ್ಡ ಆಶ್ರಮವಾಗಿ ಬೆಳೆಯಲಿದೆ. ಈ ಆಶ್ರಮವನ್ನು ಬೆಳೆಸುವ ಮಹಾತ್ಕಾರ್ಯ ಈ ಭಾಗದ ಜನರ ಮೇಲಿದೆ ಎಂದರು.
ಕಿರ್ಲೋಸ್ಕರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ, ಹುಬ್ಬಳ್ಳಿಯ ದತ್ತಾವಧೂತರು, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದಜಿ, ರಾಣೆಬೆನ್ನೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪ್ರಕಾಶಾನಂದಜೀ, ವಿಜಯಪುರದ ಕೃಪಾಮಯಿ ಶಾರದಾಶ್ರಮದ ಮಾತಾ ಕೈವಲ್ಯಮಯಿ, ಮಾತಾಜಿ ಪ್ರಬೋಧಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net