

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಭಗೀರಥ ಮಹರ್ಷಿ ಜಯಂತಿ ಸರಳವಾಗಿ ಆಚರಿಸಲಾಯಿತು.
ಉಪ್ಪಾರ ಸಂಘಟನೆಗಳು, ನಗರಸಭೆ ಕಚೇರಿ, ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ಸೂರ್ಯವಂಶದ ರಾಜನಾದ ಭಗೀರಥ ಮಹಾರಾಜ ತನ್ನ ಜನರಿಗಾಗಿ ಶಿವನ ತಪಸ್ಸು ಮಾಡಿ ಗಂಗೆಯನ್ನು ಧರೆಗೆ ತಂದ ಮಹಾ ಪುರುಷ. ಅವರ ತತ್ವ ಸಿದ್ದಾಂತಗಳು ಇಂದಿಗೂ ಪ್ರಸ್ತುತ ಎಂದರು.
ಭಗೀರಥ ಮಹರ್ಷಿಗಳ ತಪೋ ಶಕ್ತಿಗೆ ಶಿವನೇ ಪ್ರತ್ಯಕ್ಷವಾಗಿ, ಧರೆಗೆ ಗಂಗೆಯನ್ನು ಇಳಿಸಿದರು ಎಂಬ ಹೇಳಲಾಗುತ್ತದೆ. ಗಂಗೆಯನ್ನು ಭೂಮಿಗೆ ತರಲು ಭಗೀರಥ ಮಹರ್ಷಿಗಳು ಪಟ್ಟ ಶ್ರಮವನ್ನು ಈಗ ಭಗೀರಥ ಪ್ರಯತ್ನ ಮಾಡು ಎಂದು ನಾವೆಲ್ಲರೂ ಹೇಳುತ್ತಿದ್ದೇವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಅಧಿಕಾರಿ ಉಪವಿಭಾಗಿಯಾಧಿಕಾರಿ ಸಿದ್ದಲಿಂಗೇರ್ಶವರ ರಂಗಣ್ಣವರ, ಪ್ರಮುಖರಾದ ಸೋಮಪ್ಪ ಉಪ್ಪರ, ಎಸ್,ಪರಶುರಾಮ, ಯು.ವೆಂಕಟೇಶ್, ಅಶ್ವಥಾಮ, ಬಸವರಾಜ, ಆಂಜನೇಯಲು, ಗಂಗಮ್ಮ ಗುಡಿಹಿಂದು, ಗೋಪಾಲ ಇತರರಿದ್ದರು.