ಬಡತನದಲ್ಲೂ ಸಾಮರಸ್ಯದ ಜೀವನ ಬೇಂದ್ರೆ

31 MANJU 06
Published on

ಹೊಸಪೇಟೆ: ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂದು ಸಾರಿದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡಕ್ಕೆ ಎರಡನೇ ಜ್ಞಾನಪೀಠ ತಂದುಕೊಟ್ಟವರು ಎಂದು ನಗರದ ನಿವೃತ್ತ ಪ್ರಾಂಶುಪಾಲ ಪ್ರೊ.ಯು.ರಾಘವೇಂದ್ರರಾವ್ ತಿಳಿಸಿದರು.

ಚೇತನ ಸಾಹಿತ್ಯ ಸಂಸ್ಥೆ, ದಲಿತ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬಾಲಕೀಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಶುಕ್ರವಾರ ದ.ರಾ.ಬೇಂದ್ರೆಯವರ ೧೩೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂತಾಯಿಗೆ, ಕನ್ನಡ ತಾಯಿಗೆ ಮತ್ತು ಹೆತ್ತ ತಾಯಿಗೆ ಅತ್ಯಂತ ಮಹತ್ವ ನೀಡಿದರು. ಬೇಂದ್ರೆಯವರು ಅತ್ಯಂತ ಬಡತನದಲ್ಲೂ ಸಾಮರಸ್ಯದ ಜೀವನವನ್ನು ಸಾಗಿಸಿದರು. ಅವರು ಕನ್ನಡ ಸಾರಸತ್ವ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿ ಎಲ್ಲಾ ಪ್ರಕಾರಗಳಲ್ಲೂ ಸಾಹಿತ್ಯ ರಚಿಸಿದ್ದಾg ಎಂದರು.

ಸAಗೀತ ಭಾರತಿ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಂದ್ರೆಗೆ ಬೇಂದ್ರೆಯವರೇ ಸಾಟಿ. ಅವರ ಪದಗಳೊಂದಿಗೆ ಹೊರಹೊಮ್ಮಿರುವ ನೋವಿನ ಭಾವಗಳು ಮಾತ್ರ ಎಲ್ಲಾ ಸಹೃದಯರನ್ನು ಸೆಳೆದಿವೆ ಎಂದರು.

ಉಪನ್ಯಾಸಕ ಡಾ.ದಯಾನಂದ ಕಿನ್ನಾಳ್ ಮಾತನಾಡಿ, ತಮ್ಮ ಬದುಕು ಸಾಗಿಸಿದ್ದಕ್ಕಿಂತ ಹಲವರ ಬದುಕು ರೂಪಿಸಿದವರು ಬೇಂದ್ರೆ. ಮಗ ಸಾವಿನ ನೋವಿನಲ್ಲೂ ಹೆಂಡತಿಯ ಮುಖ ನೋಡಲಾರದೇ “ನೀ ಹಿಂಗ ನೋಡಬೇಡ ನನ್ನ.. ನೀ ಹಿಂಗ ನೋಡಿದರೆ ನನ್ನ; ತಿರುಗಿ ನಾ ಹೆಂಗ ನೋಡಲೇ ನಿನ್ನ” ಎನ್ನುವ ನೋವಿನ ಸಾಲುಗಳನ್ನು ಬರೆದು, ಒಡನಾಡಿದ ಜೀವವನ್ನು ಕಳೆದುಕೊಂಡವರ ಭಾವ ಹೇಗಿರುತ್ತದೆ ಎಂಬುದನ್ನು ಅಭಿವ್ಯಕ್ತಿಸಿದ್ದಾರೆ ಎಂದರು.

ಚೇತನ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಎಚ್.ಎಂ.ಜAಬುನಾಥ, ಗಾಯಕಿ ಪೂರ್ಣಿಮಾ ಗುರುರಾಜ್, ನಾಗರಾಜ ಪತ್ತಾರ್, ಕಸಾಪ ಕಾರ್ಯದರ್ಶಿ ಸೊ.ದ.ವಿರುಪಾಕ್ಷಗೌಡ, ಪ್ರಮುಖರಾದ ಎಂ.ಉಮಾಮಹೇಶ್ವರ, ತಾಯಪ್ಪ ನಾಯಕ, ವಿಶ್ವನಾಥ ಕವಿತಾಳ, ಪಾರ್ವತಿ, ಎನ್.ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net