

ಹೊಸಪೇಟೆ: ವಿಂಟೇಜ್ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ನಗರದ ಹೊರ ವಲಯದ ರಾಯರಕೆರೆ ಬಳಿ ಭಾನುವಾರ ನಡೆದಿದೆ.
ಬೆಲ್ಜಿಯಂ ಬಿ.ಜಿ.ಫ್ರಾನ್ಸಿಸ್ ಎಂಬುವರ ವಿಂಟೇಜ್ ಕಾರು ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟುಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಭೇಟಿ ನೀಡಿದರು.
ಪ್ರವಾಸೋದ್ಯಮ ಕ್ಷೇತ್ರ ಆಕರ್ಷಣೆಗಾಗಿ ಆಯೋಜಿಸಲಾಗಿದ್ದ ವಿಂಟೇಜ್ ಸಂಭ್ರಮದಲ್ಲಿ 100 ವರ್ಷ ಪೂರೈಸಿದ್ದ 20 ಕಾರುಗಳು ಭಾಗಿಯಾಗಿದ್ದವು. ಹಂಪಿಯ ವಿವಿಧ ಸ್ಮಾರಕಗಳ ಬಳಿ ಶನಿವಾರ ಸಂಚಾರ ನಡೆಸಿ ಅತ್ಯಾಕರ್ಷಿಸಿದವು. ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಿಧಗಿಸಿದ ಹಿನ್ನೆಲೆ ಬಹುತೇಕವಾಗಿ ಸುಟ್ಟುಹೋಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರಸ್ತಿಗಾಗಿ ಸುಟ್ಟ ಕಾರನ್ನು ಬೇರೆ ವಾಹನದಲ್ಲಿ ಬೆಂಗಳೂರಿಗೆ ಕೊಂಡ್ಯೋದರು.