ಹೊಸಪೇಟೆಯಲ್ಲಿ ಮತ್ತೆ ಬಾರಿ ಕರಡಿ ಪ್ರತ್ಯೇಕ್ಷ

NEWS
ಹೊಸಪೇಟೆಯ ರಾಣಿಪೇಟೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಚರಿಸಿದ ಕರಡಿ
Published on

ಹೊಸಪೇಟೆ: ನಗರದ ವಿವಿಧ ಕಡೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಕರಡಿ ಪ್ರತ್ಯಕ್ಷವಾಗಿದ್ದು, ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಸಿತು. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಕರಡಿಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ನಸುಕಿನ ವೇಳೆಗೆ ಬೈಪಾಸ್ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ನಂತರ ನಗರದ ರಾಣಿಪೇಟೆಯ ಮನೆಯೊಂದರ ಅಂಗಳದಲ್ಲಿ ಕರಡಿ ಆಡುತ್ತಿರುವುದನ್ನು ಮಹಿಳೆಯೊಬ್ಬರು ನೋಡಿ ಕೂಗಾಗಿದ್ದಾರೆ. ಗಾಬರಿಗೊಂಡ ಕರಡಿ ಸಮೀಪದ ಶ್ರೀರಾಮುಲು ಉದ್ಯಾನದ ಪೊದೆಯಲ್ಲಿ ಅಡಗಿ ಕೊಂಡಿತು. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 5.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ್ದರು. ಆದರೆ ಕರಡಿ ಸೆರೆಹಿಡಿಯುವ ಪರಿಕರಗಳಿಲ್ಲದ ಕಾರಣ ಅವುಗಳನ್ನು ತಾಲೂಕಿನ ಕಮಲಾಪುರದಿಂದ ತರಿಸಿ ಬೆಳಿಗ್ಗೆ 7.30ಕ್ಕೆ ಕರಡಿ ಸೆರೆ ಹಿಡಿದರು.

ಎರಡು ವರ್ಷದ ಹಿಂದೆ ರಾಣಿಪೇಟೆ ಪ್ರದೇಶಕ್ಕೆ ಕರಡಿಯೊಂದು ಬಂದಿತ್ತು. ಮನೆಯ ತಾರಸಿ ಮೇಲೆ ಬಂದಿದ್ದ ಅದನ್ನು ಅರಿವಳಿಕೆ ಇಂಜೆಕ್ಷನ್ ನೀಡಿ ಬಳಿಕ ಸೆರೆ ಹಿಡಿಯಲಾಗಿತ್ತು. ನಗರ ಹೊರವಲಯದಲ್ಲಿ ಸ್ಮಶಾನದಲ್ಲಿನ ಎಣ್ಣೆ ಹಾಗೂ ಊಟ ತಿನ್ನಲು ಈ ಕಡೆ ಬಂದಿದೆ ಆದರೆ ಜನರನ್ನು ನೋಡಿ ಗಾಬರಿಗೊಂಡಿದೆ ಯಾವುದೇ ರೀತಿಯಲ್ಲಿ ಯಾರ ಮೇಲೆಯೂ ದಾಳಿ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಎರಡಲ್ಲ ಒಂದು:

ಇಲ್ಲಿನ ಶ್ರೀರಾಮುಲು ಉದ್ಯಾನ ಬಳಿ ಸರೆಯಾದ ಕರಡಿ ಜತೆ ಮರಿಕೂಡ ಇತ್ತು ಎಂದು ಬೈಪಾಸ್ ಹಾಗೂ ರಾಣಿಪೇಟೆಯಲ್ಲಿ ಒಂದೊAದು ಕರಡಿ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಇನ್ನೋಂದು ಕರಡಿಯ ಹುಡುಕಾಟ ನಡೆಸಿದ ಅರಣ್ಯ ಸಿಬ್ಬಂದಿ, ಗಾಬರಿಯಾಗಿ ಅಲ್ಲಲ್ಲಿ ಓಡಾಡಿರುವುದರಿಂದ ಜನರಿಗೆ ಗೊಂದಲವಾಗಿದೆ. ಎರಡಲ್ಲ ಒಂದೆ ಕರಡಿ ಎಂದು ಎಂದು ಅರಣ್ಯ ಅಧಿಕಾರಿಗಳು ಖಚಿತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net