ಬಿಡಿಸಿಸಿ ಬ್ಯಾಂಕ್‌ಗೆ 12.53 ಕೋಟಿ ರೂ. ಲಾಭ

news
ಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ
Published on

ಹೊಸಪೇಟೆ: ಬಿಡಿಸಿಸಿ ಬ್ಯಾಂಕ್ 2023-24ನೇ ಸಾಲಿನಲ್ಲಿ 12.53 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ತಿಳಿಸಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಡಿಸಿಸಿ ಬ್ಯಾಂಕ್ 102ನೇ ವರ‍್ಷಿಕ ರ‍್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,

ಬಿಡಿಸಿಸಿ ಬ್ಯಾಂಕ್ 2553.92 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ಪ್ರಸ್ತುತ ಸಾಲಿನ ಮಾ.31ರಂತೆ 127.86 ಕೋಟಿ ರೂ. ಶೇರು ಬಂಡವಾಳ, 158.63 ಕೋಟಿ ರೂ. ಕಾಯ್ದಿಟ್ಟ ನಿಧಿ, 226.96 ಬ್ಯಾಂಕಿನ ಸ್ವಂತ ಬಂಡವಾಳ, 1563.90 ಕೋಟಿ ರೂ. ಠೇವಣಿ ಮೊತ್ತದೊಂದಿಗೆ 1511.03 ಕೋಟಿ ಸಾಲ ವಿತರಿಸಿದ್ದು, 1743.25 ಹೊರಬಾಕಿ ಸಾಲದ ಮೊತ್ತ ಹಾಗೂ ಬ್ಯಾಂಕಿನ ಒಟ್ಟು ಹೂಡಿಕೆಗಳು 643.05 ಕೋಟಿಗಳೊಂದಿಗೆ ಪ್ರಸ್ತುತ ರ‍್ಷ ಬ್ಯಾಂಕಿನ ಒಟ್ಟು ಲಾಭ 12.53 ಕೋಟಿ ರೂ ಆಗಿದೆ ಎಂದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಹಕಾರಿ ವಲಯದಲ್ಲಿ ಹೊಸದಾಗಿ ತುಂಗಭದ್ರಾ ಕ್ಷೇಮಾಭಿವೃದ್ಧಿ ಸಹಕಾರಿ ಸಂಘ ಸ್ಥಾಪಿಸಲು ನರ‍್ಧರಿಸಿದೆ. ಇದರಡಿ 5 ಕರ‍್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ನಿಧನರಾದ ರೈತರ ಸಾಲ ಮನ್ನಾ, ಶವಸಂಸ್ಕಾರಕ್ಕೆ ಸಹಕಾರ, ರೈತರ ಮಕ್ಕಳಿಗೆ ಪ್ರೋತ್ಸಾಹಧನ, ವಿದೇಶ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ನೀಡುವ ಕುರಿತು ಚಿಂತನೆ ನಡೆದಿದೆ ಎಂದರು.

.

ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಿ ಆನ್‌ಲೈನ್ ಮೂಲಕವೇ ರೈತರಿಗೆ ಕೆಸಿಸಿ ಸಾಲಗಳನ್ನು ನೀಡಲು ಹಾಗೂ 10 ಲಕ್ಷ ರೂ.ವರೆಗೆ ಬ್ಯಾಂಕಿನ ಮೂಲಕ ನೇರವಾಗಿ ರೈತರಿಗೆ ಸ್ವಾಭಿಮಾನಿ ಕಿಸಾನ್ ಕ್ರೆಡಿಟ್ ಸಾಲ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ, ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಸದಸ್ಯರಾದ ಚೊಕ್ಕ ಬಸವನಗೌಡ, ಎಲ್.ಎಸ್.ಆನಂದ, ಚಿದಾನಂದ ಐಗೋಳ, ಪಿ.ಮೂಕಯ್ಯಸ್ವಾಮಿ, ವೈ.ಅಣ್ಣಪ್ಪ, ಬಿ.ನವೀನ್ ಕುಮಾರ್ ರೆಡ್ಡಿ, ಹುಲುಗಪ್ಪ ನಾಯಕರ, ಜೆ.ಎಂ.ಶಿವಪ್ರಸಾದ್, ಸಂದೀಪ್ ಸಿಂಗ್, ಪಿ.ವಿಶ್ವನಾಥ, ಟಿ.ಎಂ.ಚಂದ್ರಶೇಖರಯ್ಯ, ಸಿಇಒ ಬಿ.ಜಯಪ್ರಕಾಶ್, ಉಪಪ್ರಧಾನ ವ್ಯವಸ್ಥಾಪಕರಾದ ಡಿ.ಶಂಕರ್, ಶಶಿಕಾಂತ ಹೆಸರೂರು, ಕೆ.ತಿಮ್ಮಾರೆಡ್ಡಿ, ಸಿ.ಮರಿಸ್ವಾಮಿ, ಮಾಗಳ ಕೊಟ್ರೇಶಪ್ಪ, ಕೆ.ಪಿ.ಉಮಾಪತಿ, ಎಸ್.ಎಲ್.ಬೆನ್ನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net