ಬಯಲಾಟದ ಪರಂಪರ ಸಂಶೋಧನೆಯಾಗಲಿ

30 MANJU 02
Published on

ಹೊಸಪೇಟೆ: ಬಯಲಾಟ ಪ್ರರ‍್ಶನಗಳಲ್ಲಿ ಯಾವುದೇ ರೀತಿಯ ಬಡವ ಶ್ರೀಮಂತ ಮೇಲು ಕೇಳು ಎಂದು ಭಾವಿಸದೆ ಕಲಾವಿದರ ಪ್ರತಿಭೆಯನ್ನು ಗುರುತಿಸುವುದು ಮತ್ತು ಎಲ್ಲರೂ ಒಂದೇ ಎನ್ನುವುದೇ ಮುಖ್ಯ ತತ್ವವಾಗಿದೆ ಎಂದು ರ‍್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಆರ್.ದರ‍್ಗಾದಾಸ ಅವರು ತಿಳಿಸಿದರು.

ಬಾಗಲಕೋಟೆ ರ‍್ನಾಟಕ ಬಯಲಾಟ ಅಕಾಡೆಮಿಯಿಂದ ಕನ್ನಡ ವಿವಿಯ ನಾಟಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಭುವನ ವಿಜಯದಲ್ಲಿ ಸೋಮವಾರ ನಡಧ ಬಯಲಾಟಗಳ ಸಂಶೋಧನೆ ಹೊಸ ಸಾಧ್ಯತೆಗಳು ಎಂಬ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರರ‍್ಶನದಲ್ಲಿ ಮಾತನಾಡಿದರು.

ಬಯಲಾಟ ಎನ್ನುವುದು ಇಡೀ ಊರನ್ನೇ ಆವರಿಸಿಕೊಂಡು ಬಿಟ್ಟಿರುತ್ತದೆ. ಇಲ್ಲಿ ಮುಖ್ಯವಾಗಿ ರೈತಾಪಿ ಜನ ಮತ್ತು ಬಡವರು ಹೆಚ್ಚಾಗಿ ಭಾಗವಹಿಸುತ್ತಾರೆ. ವ್ಯಕ್ತಿಯಲ್ಲಿ ಬೇರೊಂದು ರೀತಿಯ ಸಂಚಲನ ಮೂಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಆತನ ದೈನಂದಿನ ಮಾತುಗಳಿಗಿಂತ ಪ್ರರ‍್ಶನದಲ್ಲಿ ಮಾತಿನ ಶಕ್ತಿ ಹೆಚ್ಚಾಗುತ್ತದೆ. ಸರ‍್ವಜನಿಕ ಸ್ಥಳಗಳಲ್ಲಿ. ಈ ಬಯಲಾಟಗಳು ಕಲಾವಿದರಿಗೆ ಆತ್ಮಸ್ಥರ‍್ಯ ತುಂಬುತ್ತವೆ. ಬಯಲಾಟ ಪ್ರರ‍್ಶನದಲ್ಲಿ ಜನರು ತಮ್ಮ ತಮ್ಮಲ್ಲಿ ಸಂಭಾಷಣೆ ಮಾಡುವ ಕ್ರಿಯೆಯನ್ನು ಉಂಟುಮಾಡುತ್ತದೆ. ಹಳ್ಳಿಯ ಕಡೆಗಳಲ್ಲಿ ಹಿಂದುಳಿದ ಜಾತಿಯ ಜನರು ಬಯಲಾಟದ ಮೇಷ್ಟ್ರುಪ್ರಮುಖರಾದಾರೆ. ಹೀಗಾಗಿ ಬಯಲಾಟ ಎಂಬುದು ಯಾವುದೇ ರೀತಿಯ ರಾಜಕೀಯಕ್ಕೆ ಮತ್ತು ಯಾವುದೇ ಒಂದು ಸಮುದಾಯಕ್ಕೆ ಒಳಪಟ್ಟಿರುವುದಿಲ್ಲ. ಇಲ್ಲಿ ಕಲಾವಿದರೆ ರ‍್ಥಿಕ ಸೌಲಭ್ಯಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಬಯಲಾಟ ಎನ್ನುವುದು ಹಳ್ಳಿಯ ಶಾಲೆ. ಇಲ್ಲಿ ಸಂಗೀತ ನೃತ್ಯ ನಟನೆ ಮುಂತಾದ ಕಲೆಯನ್ನು ಹಾಗೂ ಬಯಲಾಟದ ಮೂಲಕ ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಲಾಗುತ್ತದೆ. ಸಾವಿರಾರು ಜನರನ್ನು ಒಂದೇ ಸ್ಥಳದಲ್ಲಿ ಕುಳಿತುಕೊಂಡು ನೋಡುವಂತೆ ಮಾಡುತ್ತದೆ. ವಿದ್ಯರ‍್ಥಿಗಳಿಗೆ ಬಯಲಾಟ ಸಂಶೋಧನೆ ಹೇಗೆ ಮಾಡಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ, ಪ್ರಮುಖರಾದ ಸುಮಾ ಕಮ್ಮಾರ, ಅರುಣ್ ಜೋಳದ ಕೂಡ್ಲಿಗಿ, ಬಿ.ಸತೀಶಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net