ಸ್ನಾನಕ್ಕೆ ಹೋದ ವ್ಯಕ್ತಿ ನೀರುಪಾಲು

ನೀರುಪಾಲು
Published on

ಹೊಸಪೇಟೆ: ತಾಲೂಕಿನ ಹಂಪಿ ಮಾರ್ಗದಲ್ಲಿನ ಗಾಳೆಯಮ್ಮನ ಗುಡಿ ಬಳಿಯ ಟಿಬಿಬಿ ಕಾಲೂವೆಯಲ್ಲಿ ಸ್ನಾನಕೆಂದು ಇಳಿದ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡಾದ ಪೀಕಾನಾಯ್ಕ (46) ಕಾಲು ಜಾರಿ ನೀರು ಪಾಲಾದ ಘಟನೆ ಮಂಗಳವಾರ ನಡೆದಿದೆ.

ಗಾಳೆಯಮ್ಮನ ದೇವಿಗೆ ದರ್ಶನಕ್ಕೆ ಬಂದ ಪೀಕಾನಾಯ್ಕ ಕಾಲೂವೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಈಜು ಬರದೇ ಮುಳುಗಿದ್ದಾರೆ. ಅಕ್ಕಪಕ್ಕದಲ್ಲಿದ್ದ ಜನರು ರಕ್ಷಣೆಗೆ ಇಳಿದರು, ಕೈಗೆ ಸಿಗದೇ ಸುಳಿಯಲ್ಲಿ ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಹಂಪಿ ಪ್ರವಾಸಿ ಠಾಣೆ ಪೊಲೀಸರು ಭೇಟಿ ನೀಡಿ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net