

ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ಶ್ರೀ ಉಕ್ಕಡಗಾತ್ರಿ ಕರಿ ಬಸವೇಶ್ವರ ಗದ್ದುಗೆಯ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಬುಧವಾರ ಜಿ. ನಾಗಲಾಪುರ ಗುರುಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರದ್ದಾ-ಭಕ್ತಿಯಿಂದ ಜರುಗಿತು.
ಮೂರ್ತಿ ಪ್ರಾಣಪ್ರತಿಷ್ಠಾಪನೆ ನಿಮಿತ್ತ ನೂತನ ಮೂರ್ತಿಗೆ ಜಲಾಭಿಷೇಕ, ಧಾನ್ಯಾಭೀಷೇಕ, ರುದ್ರಭೀಷೇಕ, ಪುಷ್ಪಾಭೀಷೇಕ, ನವಗ್ರಹ ಶಾಂತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಮೂರ್ತಿ ಪ್ರಾಣಪ್ರತಿಷ್ಠಾಪನೆ ನಂತರ ಭಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿ ದರ್ಶನ ಪಡೆದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ್, ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕೊಟ್ಗಿ ಮಾರುತೇಶ್, ಉಪಾಧ್ಯಕ್ಷ ಬಿ.ಗಾಳೆಪ್ಪ, ಪ್ರಮುಖರಾದ ಸಿ.ಮಂಜುನಾಥ, ಎಚ್.ಮಂಜುನಾಥ, ಕೆ.ಚಿದಾನಂದ, ಟಿ.ಹುಲುಗಪ್ಪ, ಕೆ.ಮಲ್ಲನಗೌಡ, ಉದ್ದೇಕಲ್ ವೆಂಕಟೇಶ್, ಎಲ್.ನಾಗರಾಜ ಇತರರಿದ್ದರು.