ವಿಜಯನಗರದಲ್ಲಿ 13 ನೇ ಸಮ್ಮೇಳನ

Basavaraja
R S BASAVARAJ
Published on

ಹೊಸಪೇಟೆ: ಸಿಪಿಐ(ಎಂ) ಪಕ್ಷದ ವಿಜಯನಗರ ಜಿಲ್ಲಾ ಸಮ್ಮೇಳನವನ್ನು ನ.26, 27ರಂದು ಎರಡು ದಿನಗಳ ಕಾಲ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಆರ್.ಎಸ್.ಬಸವರಾಜ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಸಮ್ಮೇಳನದಲ್ಲಿ ಗಾಂಧಿ ಚೌಕ್ ನಿಂದ ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ ನಡೆಸಿ, ಬಹಿರಂಗ ಸಮಾವೇಶ ಆಯೋಜಿಸಲಾಗುವುದು. ನಂತರ ಎರಡನೇ ದಿನ ಸಭೆ ನಡೆಸಿ, ಜಿಲ್ಲಾ ಸಮಿತಿ ಆಯ್ಕೆ ಮಾಡಲಿದ್ದು, ಬಡ ಕುಟುಂಬಗಳಿಗೆ ನಿವೇಶನ, ಸಕ್ಕರೆ ಕಾರ್ಖಾನೆ ಸ್ಥಾಪನೆ, ದುಡಿಯುವ ಜನರ ಉನ್ನತಿಗಾಗಿ ನಾನಾ ವಿಷಯಗಳ ಕುರಿತು ಚರ್ಚಿಸಲಾಗುವುದು. ಪಕ್ಷದ ಜಿ.ನಾಗರಾಜ, ಎಸ್ ವೈ ಗುರು ಶಾಂತ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ಮುಂದಿನ ಏಪ್ರಿಲ್ನಲ್ಲಿ ಪಕ್ಷದ 24ನೇ ಅಖಿಲ ಭಾರತ ಮಹಾ ಅಧಿವೇಶನ ತಮಿಳುನಾಡಿನ ಮಧುರೈನಲ್ಲಿ ನಡೆಯಲಿದೆ. ಇದಕ್ಕಾಗಿ ನಾನಾ ಹಂತದ ಸಮಾವೇಶಗಳನ್ನು ಆಯೋಜಿಸಿ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಡಿ.29, 30, 31ರಂದು ತುಮಕೂರಿನಲ್ಲಿ ರಾಜ್ಯ ಸಮ್ಮೇಳನ ನಡೆಯಲಿದೆ. ಇದರಲ್ಲಿ ಪ್ರಮುಖವಾಗಿ ಮೂರು ಅಜೆಂಡಾ, ಕಳೆದ ಮೂರು ವರ್ಷದಲ್ಲಿ ರಾಜ್ಯದ ರಾಜಕೀಯ ದಿಕ್ಕು ಯಾವ ಕಡೆ ಚಲಿಸುತ್ತಿದೆ. ಅದರಲ್ಲಿ ನಮ್ಮ ಪಾತ್ರ, ನಮ್ಮ ಬೆಳವಣಿಗೆ ಮತ್ತು ಮುಂದಿನ ಮೂರು ವರ್ಷಗಳ ಕಾರ್ಯಕ್ರಮಕ್ಕೆ ರಾಜ್ಯ ನಾಯಕತ್ವ ಚರ್ಚೆ ನಡೆಯಲಿದೆ. 29ರಂದು 10 ಸಾವಿರ ಕಾರ್ಮಿಕರಿಂದ ರ್ಯಾಲಿ ನಡೆಯಲಿದ್ದು, ಕೇರಳ ಮಾಜಿ ಸಚಿವೆ ಎಂ.ಎ ಬೇಬಿ, ವಿಜಯ ರಾಘವನ್, ಬಿ.ವಿ.ರಾಘು ಭಾಗವಹಿಸುವರು. ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಆದ್ಯತೆ, ದೇಶ ಮತ್ತು ರಾಜ್ಯದ ಸೌಹಾರ್ದತೆಯ ವಿಸ್ತರಣೆ ಮಾಡುವ ಕುರಿತು, ರಾಜ್ಯದ ಜನತೆಯ ಬದುಕನ್ನು ಉಳಿಸುವ ಹೊಣೆಗಾರಿಕೆ ಸಮ್ಮೇಳನದ ಪ್ರಮುಖ ಉದ್ದೇಶ ಎಂದರು.

ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ಯಲ್ಲಾಲಿಂಗ, ಜಂಬಯ್ಯ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net