ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದ ಬಸವಣ್ಣ

30 MANJU 02
Published on

ಹೊಸಪೇಟೆ: ಬಸವಣ್ಣ ನವರು ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದ್ದಾರೆ. ಅವರ ಆದರ್ಶ ಮತ್ತು ತತ್ವಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮಿಗಳು ಹೇಳಿದರು.

ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಬುಧುವಾರ ಬಸವ ಜಯಂತಿ ನಿಮಿತ್ತ ನಡೆದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ಜೋಡಿಗಳಿಗೆ ಶುಭ ಹಾರೈಸಿ ಆರ್ಶೀವಚನ ನೀಡಿದರು. 12 ನೇಶತಮಾನದಲ್ಲಿ ಅಣ್ಣ ಬಸವಣ್ಣ ನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕಾರ್ಯಕ್ಕೆ ಮುಂದಾಗಿ, ಸಮಾಜದಲ್ಲಿ ಸಮಾನತೆ ಸಾರಿದರು. ಅವರು ಚಿಂತನೆಗಳನ್ನು ನಾವು ಸ್ವಲ್ಪ ಮಟ್ಟಿಗೆಯಾದರೂ ಪಾಲಿಸಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ನವ ದಂಪತಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿ ತಂದೆ ತಾಯಿಯವರಿಗೆ ಕಿರ್ತಿ ತರುಬೇಕು. ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ಕಡಿಮೆ ಮಾಡುವುದರ ಜತೆಗೆ ಸಮಾಜದಲ್ಲಿ ಸಮಾನತೆಯನ್ನು ಉಂಟು ಮಾಡುತ್ತವೆ ಎಂದರು.

ಸಾಮೂಹಿಕ ವಿವಾಹದಲ್ಲಿ 18 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪ ಗ್ರೌಡ್ರ್, ಡಿವೈಎಸ್ಪಿ ಡಾ.ಟಿ.ಮಂಜುನಾಥ, ವೀರಶೈವ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ, ಕಾರ್ಯದಶಿ ನಿಲಕಂಠಗೌಡ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಪ್ರಮುಖರಾದ ಸಾಲಿಸಿದ್ದಯ್ಯ ಸ್ವಾಮಿ, ಗಂಗಾಧರಪ್ಪ, ಲಿಂಗಪ್ಪ, ಶರಣಸ್ವಾಮಿ, ಸಂತೋಷ, ಶೃತಿ ರಾಜಶೇಖರ್, ಬಸವರಾಜ ಇತರರಿದ್ದರು.

ಬೆಳಗ್ಗೆ ಬಸವೇಶ್ವರ ಭಾವಚಿತ್ರದೊಂದಿಗೆ ಆರಂಭವಾದ ಮೆರವಣಿಗೆ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ ಮಾರ್ಗವಾಗಿ ಕೊಟ್ಟೂರು ಸ್ವಾಮಿ ಮಠಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ನವ ವಧು- ವರರು ಹಾಗೂ ಎತ್ತಿನ ಬಂಡಿ, ಡೊಳ್ಳು, ಸಮಾಳ, ನಂದಿಕೋಲು ವಾಧ್ಯಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪ ಗ್ರೌಡ್ರ್, ಡಿವೈಎಸ್ಪಿ ಡಾ.ಟಿ.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net