

ಹೊಸಪೇಟೆ: ಹಾಲು, ತುಪ್ಪವನ್ನು ಮೌಢ್ಯದ ಹೆಸರಲ್ಲಿ ವ್ರ‍್ಥಮಾಡದೆ, ಅಗತ್ಯವಿರುವವರಿಗೆ ನೀಡಿದರೆ ಹಬ್ಬಕ್ಕೆ ನಿಜವಾದ ರ‍್ಥ ಸಿಗುತ್ತದೆ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸೋಮಶೇಖರ್ ಬಣ್ಣದಮನೆ ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ನಡದ ಬಸವ ಪಂಚಮಿ ಆಚರಣೆ ಪ್ರಯುಕ್ತ ಮಕ್ಕಳಿಗೆ ಹಾಲು, ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಹಲ ರ‍್ಷಗಳಿಂದ ಆಚರಿಸಲಾಗುತ್ತಿದೆ. ಜನರು ಲಕ್ಷಾಂತರ ಲೀಟರ್ ಹಾಲು, ತುಪ್ಪ, ಹಣ್ಣನ್ನು ಹುತ್ತ, ನಾಗರ ಕಲ್ಲುಗಳ ಮೇಲೆ ಸುರಿಯುತ್ತಾರೆ. ಹಾವು ಹಾಲು ಕುಡಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾದರೂ ಜನರು ಮೌಢ್ಯ ಅನುಸರಿಸುತ್ತಿದ್ದಾರೆ ಎಂದರು.
ಪ್ರಮುಖರಾದ ಮರಡಿ ಜಂಬಯ್ಯ ನಾಯಕ, ತಾಯಪ್ಪ ನಾಯಕ, ಜೆ.ಶಿವಕುಮಾರ, ಸಣ್ಣ ಮಾರಪ್ಪ, ರಾಮಚಂದ್ರ ಬಾಬು, ವೆಂಕಟೇಶ್, ಸಿ.ಈರಣ್ಣ, ಸಣ್ಣ ಈರಣ್ಣ, ರವಿ ಕುಮಾರ, ಅಂಜಲಿ ಬೆಳಗಲ್, ಬಿ.ಮಾರಣ್ಣ ಇತರರಿದ್ದರು.
ಪ್ರಮುಖರಾದ ಸೋಮಶೇಖರ್ ಬಣ್ಣದಮನೆ, ಸಣ್ಣಮಾರೆಪ್ಪ, ಮರಡಿ ಜಂಬಯ್ಯ ನಾಯಕ, ತಾಯಪ್ಪ ನಾಯಕ, ಜೆ.ಶಿವಕುಮಾರ, ರಾಮಚಂದ್ರ ಬಾಬು, ವೆಂಕಟೇಶ್ ಇತರರಿದ್ದರು.