

ಹೊಸಪೇಟೆ: ರಾಜ್ಯದಲ್ಲಿ ಬ್ಯಾಂಕ್ ಗಳ ರಾಬರಿ, ದರೋಡೆ ಪ್ರಕರಣಗಳು ಒಂದು ಕಡೆ ಹೆಚ್ಚಳವಾಗ್ತಿವೆ. ನಗರದ ಪ್ರತಿಷ್ಟಿತ ರೈತರ ಬಿಡಿಸಿಸಿ ಬ್ಯಾಂಕ್ ಗೂ ಹ್ಯಾಕರ್ಸ್ ನಿಂದ ಕನ್ನ ಹಾಕಲಾಗಿದೆಯೇ ಆರ್.ಟಿ.ಜಿ.ಎಸ್.ನಿಂದ ಹಾಕಿದ ಬರೋಬ್ಬರಿ 2.34 ಕೋಟಿ ರೂ. ಅನ್ಯಾರ ಖಾತೆಗಳಿಗೆ ಜಮವಾಗಿದ್ದು, ಇದು ಹ್ಯಾಕ್ ಮಾಡಿದ್ದಾರೆ ಎಂದು ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯನಗರ- ಬಳ್ಳಾರಿ ಜಿಲ್ಲೆಗಳ ಪ್ರತಿಷ್ಠಿತ ರೈತರ ಬಿಡಿಸಿಸಿ ಬ್ಯಾಂಕ್ ಗೆ ಡಿಜಿಟಲ್ ರಾಬರಿ ನಡೆದಿದೆ. ಉತ್ತರ ಭಾರತದ ರಾಜ್ಯಗಳ 25 ವಿವಿಧ ಬ್ಯಾಂಕ್ ಖಾತೆಗಳಿಗೆ ಕೋಟಿ ಗಟ್ಟಲೇ ಹಣ ರವಾನೆಯಾಗಿದೆ. ಬಿಡಿಸಿಸಿ ಬ್ಯಾಂಕ್ ನಿಂದ ಬೇರೆ ಖಾತೆಗಳಿಗೆ 5 ಲಕ್ಷಕ್ಕೂ ಮೇಲ್ಪಟ್ಟ ಹಣ ಆರ್.ಟಿ.ಜಿ.ಎಸ್. ಮಾಡುವಾಗ ಹ್ಯಾಕ್ ಮಾಡಲಾಗಿದೆ ಎಂದು ಈ ಸಂಬAಧ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದಲ್ಲಿ ಸಿಎಎನ್ ಪೊಲೀಸ್ ಠಾಣೆ ಇರದ ಕಾರಣ ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಆರ್ ಟಿಜಿಎಸ್ ಮಾಡುವಾಗ ಹಣ ಸಂಬAಧಿಸಿದ ಬ್ಯಾಂಕ್‌ಗೆ ಹೋಗಿಲ್ಲಾ ಅಂತ ದೂರು ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ. ಕಳೆದ ಜ.10ರಂದು ಆರ್‌ಟಿಜಿಎಸ್/ನೆಫ್ಟ್ ಮಾಡಲಾಗಿತ್ತು. ಜ.11 ಮತ್ತು 12ರಂದು ಎರಡು ದಿನ ರಜೆ ಇದ್ದಿದ್ದರಿಂದ 13ರಂದು ಹಣ ಖಾತೆಗಳಿಗೆ ಜಮೆ ಆಗದಿರುವ ಕುರಿತು ಶಾಖೆಗಳಿಂದ ಕರೆಗಳು ಬಂದಿದ್ದು, ಈ ಕುರಿತು ವಿವರಗಳನ್ನು ಪರಿಶೀಲಿಸಿದಾಗ ಬ್ಯಾಂಕಿನ ಸಿಬಿಎಸ್ ಮೂಲಕ ಎಕ್ಸ್ಎಂಎಲ್ ಮೂಲಕ ಐಡಿಬಿಐಗೆ ಕಳಿಸಲಾಗಿದೆ. ಆದರೆ, ಐಡಿಬಿಐ ಬ್ಯಾಂಕಿನಿAದ ಮುಂದೆ ಪಾವತಿಯಾಗಬೇಕಿದ್ದ ಖಾತೆಗಳ ವಿವರಗಳು ಬದಲಾವಣೆಯಾಗಿ ಅನ್ಯ ಖಾತೆಗಳ ಜಮಾ ಆಗುವ ಮೂಲಕ ಬ್ಯಾಂಕಿನ ಗ್ರಾಹಕರಿಗೆ ವಂಚನೆಯಾಗಿದೆ.
ಬ್ಯಾಂಕ್ ಹ್ಯಾಕ್ ಆಗಿರುವ ಕುರಿತು ತನಿಖೆ ಮಾಡಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬ್ಯಾಂಕಿಗೆ ಆದ ಹಾನಿಗೆ ನ್ಯಾಯ ಒದಗಿಸಬೇಕೆಂದು ಬಿಡಿಸಿಸಿ ಬ್ಯಾಂಕ್ ಸಿಇಒ ಜಯಪ್ರಕಾಶ್ ಅವರು ಜ.18 ರಂದು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆ ವರ್ಗಾವಣೆ ಮಾಡಲಾಗಿದೆ. - ಬಿಎಲ್.ಶ್ರೀಹರಿಬಾಬು, ಎಸ್ಪಿ, ವಿಜಯನಗರ
ಬಿಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ 2.34 ಕೋಟಿ ರೂ. ವರ್ಗವಣೆ ವೇಳೆ ಹ್ಯಾಕ್ ಆಗಿದೆ. ಐಡಿಬಿಐ ಬ್ಯಾಂಕ್ ಜತೆ ಪಾಲುದಾರಿಕೆಯಲ್ಲಿ ವ್ಯಾವಹಾರ ನಡೆಯುತ್ತಿದೆ. ಆದರೆ, ಹ್ಯಾಕ್ ಆಗಿರುವುದು ನಮ್ಮಿಂದನೋ ಅಥವ ಐಡಿಬಿಐ ಬ್ಯಾಂಕ್ ನಿಂದನೋ ತನಿಖೆಯಲ್ಲಿ ತಿಳಿಯಲಿದೆ. ಗ್ರಾಹಕರಿಗೆ ಹಣ ಪಾವತಿಸಲಾಗಿದೆ. - ಕೆ.ತಿಪ್ಪೇಸ್ವಾಮಿ, ಬಿಡಿಸಿಸಿ ಅಧ್ಯಕ್ಷ, ಹೊಸಪೇಟೆ