

ಹೊಸಪೇಟೆ: ಶಿಕ್ಷಣ ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಬೆಳೆಸಲಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ ಎಚ್ಚರವಹಿಸೋಣ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬಂಜಾರ ಸ್ನೇಹ ಜೀವಿ ಯುವ ಬಳಗದಿಂದ ನಗರದ ಜಿಲ್ಲಾ ಒಳಂಗಣ ಕ್ರೀಂಡಾAಗಣದಲ್ಲಿ ಭಾನುವಾರ ಬಂಜಾರ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಕೃಷಿ, ವ್ಯಾಪಾರ, ಪಶುಪಾಲನೆಗೆ ಬಂಜಾರರ ಕೊಡುಗೆ ಅಪಾರವಾಗಿದೆ. ಭೂರಹಿತ ಬಂಜಾರರು ಶ್ರಮಜೀವಿಗಳು ಕೂಡ ಹೌದು. ಕೂಲಿ ಮಾಡಿಯಾದರೂ ಮಕ್ಕಳನ್ನು ಶಿಕ್ಷಣ ಕೊಡಿಸುವ ಛಲ ಬಂಜಾರರಲಿದೆ. ಆ ಕಾರಣದಿಂದಾಗಿ ಬಂಜಾರರ ಮಕ್ಕಳು ಶೈಕ್ಷಣಿಕವಾಗಿ ತುಂಬಾ ಸಾಧನೆ ಮಾಡುತ್ತಿದ್ದಾರೆ ಎಂದರು.
ಕೆ.ಎA.ಎಫ್ ಅಧ್ಯಕ್ಷ ಭೀಮಾನಾಯ್ಕ ಮಾತನಾಡಿ, ಬಂಜಾರರ ಸೇವೆಗೆ ಸದಾ ಸಿದ್ದನಿದ್ದೇನೆ. ಈ ಹಿಂದೆ ಶಾಸಕರಾಗಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಂಜಾರ ಸಮುದಾಯದ ಪರ ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಮುದಾಯದ ಎಳಿಗೆಗೆ ಸಂಕಲ್ಪ ಮಾಡೋಣ. ಅಂಬೇಡ್ಕರ್, ಸೇವಾಲಾಲ್ ಅವರ ತತ್ವಗಳನ್ನು ಅರತು, ನಮ್ಮಲ್ಲಿ ಅಳವಡಿಸಿ ಹೋರಾಟದ ಮನೋಭಾವ ಮೂಡಬೇಕಿದೆ ಎಂದರು.
ಬೆAಗಳೂರು ಹೈಕೋರ್ಟ್ ವಕೀಲ ಎನ್.ಅನಂತನಾಯ್ಕ ಮಾತನಾಡಿ, ಬಂಜಾರರಿಗೆ ಸೇವಾಲಾಲ್ ಮತ್ತು ಅಂಬೇಡ್ಕರ್ ಅವರು ಎರಡು ಕಣ್ಣುಗಳಿದಂತೆ. ಸೇವಾಲಾಲ್ ಅವರ ಸಂಸ್ಕೃತಿ, ಅಂಬೇಡ್ಕರ್ ಅವರ ಸ್ವಾಭಿಮಾನ ನಮ್ಮ ದಾರಿಯಾಗಬೇಕು. ಭೂಮಿಯ ಒಡೆತನ ಇಲ್ಲದ ಬಂಜಾರರಿಗೆ ಶಿಕ್ಷಣವೇ ಆಸ್ತಿಯಿದ್ದಂತೆ. ತಪ್ಪದೇ ಮಕ್ಕಳು ಓದಬೇಕು. ಉತ್ತಮ ಉದ್ಯೋಗದ ದಾರಿ ಹಿಡಿಯಬೇಕು.
ಕೊಟ್ಟೂರು ದೂಪದಹಳ್ಳಿ ತಾಂಡಾದ ಬಂಜಾರ್ ಶಿವಶಕ್ತಿ ಪೀಠದ ಶಿವಪ್ರಕಾಶ್ ಸ್ವಾಮೀಜಿ, ಸಂಡೂರು ತಾಲೂಕಿನ ಸುಶೀಲನಗರದ ಶೀ ಶಿವಶಕ್ತಿ ಪೀಠದ ತಿಪ್ಪೇಸ್ವಾಮಿ ಸ್ವಾಮೀಜಿ ಸಾನಿಧ್ಯ ವಹಿಸಿದರು. ಎಐಬಿಎಸ್‌ಎಸ್ ರಾಜ್ಯಾಧ್ಯಕ್ಷ ವಿಜಯ ಜಾದವ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ನಾಯ್ಕ, ಕೆ.ಶಿವಕುಮಾರ್, ಅಲೋಕ್‌ನಾಯ್ಕ, ಮಂಜುನಾಯ್ಕ, ವೆಂಕಟೇಶ್‌ನಾಯ್ಕ, ರಾಮುನಾಯ್ಕ, ಈಶ್ವರ್‌ನಾಯ್ಕ, ರಾಜುನಾಯ್ಕ ಇತರರಿದ್ದರು.