ಹೊಸಪೇಟೆ ತಾಲೂಕಿನ ಬೈಲುವದ್ದಿಗೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಎತ್ತು ಬಲಿ

Leopard
Published on

ಹೊಸಪೇಟೆ: ತಾಲೂಕಿನ ಬೈಲುವದ್ದಿಗೆರೆ ಗ್ರಾಮದ ಹೊಲವೊಂದರಲ್ಲಿ ಕಟ್ಟಿಹಾಕಿದ್ದ ಎತ್ತನ್ನು ಬುಧವಾರ ಬೆಳಗ್ಗೆ ಚಿರತೆ ಕೊಂದು ಹಾಕಿದೆ. ಗ್ರಾಮದ ರೈತ ಉಳ್ಳಾಗಡ್ಡಿ ವೀರಣ್ಣಗೆ ಸೇರಿದ ಎತ್ತು ಸತ್ತಿದೆ. ಬೈಲುವದ್ದಿಗೆರೆ, ಗುಂಡ್ಲುವದ್ದಿಗೆರೆ ಪ್ರದೇಶಗಳಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೈತರು ಭಯದಲ್ಲಿ ಜೀವನ ನಡೆಸುವಂತಾಗಿದೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷಿಸಿದ್ದಾರೆ. ಇದರಿಂದ ಜಾನುವಾರುಗಳನ್ನು ಕಳೆದುಕೊಳ್ಳುವಂತಾಗಿದೆ. ಈಗಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಚಿರತೆ ದಾಳಿಯಿಂದ ಜಾನುವಾರು ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆ ಜಾನುವಾರುಗಳನ್ನೇ ಪರಿಹಾರವಾಗಿ ನೀಡಬೇಕು ಎಂದು ರೈತರಾದ ಉಳ್ಳಾಗಡ್ಡಿ ವೀರಣ್ಣ, ಶಿವಕುಮಾರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net