

ಹೊಸಪೇಟೆ: ನಗರದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಎ1 ಆರೋಪಿ ಸೇರಿ ಐದು ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದರು.
ನಗರದ ಸುದ್ದಿಗಾರರೊಂದಿ ಮಾತನಾಡಿದ ಅವರು, ಮನಿ ಡಬ್ಲಿಂಗ್ ಹೆಸರಿನಲ್ಲಿ ಕೋಟಿ, ಕೋಟಿ ವಂಚನೆ ಆರೋಪದಡಿ ತಲೆಮರೆಸಿಕೊಂಡು ಓಡಾಡ್ತಿದ್ದ ಪ್ರಮುಖ ಆರೋಪಿ ಮುಮ್ತಾಜ್ ಬೇಗಂ ಸೇರಿ ಆರೋಪಿಗಳಾದ ಆರೀಫಾ ಬೇಗಂ, ಜಾವೇದ್ ಎನ್ನುವವರನ್ನ 10 ದಿನಗಳ ಬಳಿಕ ಗೋವಾದಲ್ಲಿ ಬಂಧಿಸಲಾಗಿದೆ. ಇನ್ನು ಕೇರಳ ಮೂಲದ ನಸ್ರೀನ್ ಹಾಗೂ ಜಬೀರ್ ಜೇನಗಶೇರಿ ಎಂಬುವನ್ನು ಕೆರಳದಲ್ಲೇ ಪೊಲೀಸರು ಬಂಧಿಸಿದ್ದಾರೆ.
ನಗರದ ಡಿವೈಎಸ್ಪಿ ಮಂಜುನಾಥ, ಹೊಸಪೇಟೆ ಪಟ್ಟಣ ಠಾಣೆ ಲಖನ್ ಮಸಗುಪ್ಪಿ, ಗ್ರಾಮೀಣ ಠಾಣೆ ಸಿಪಿಐ ಗುರುರಾಜ ಕಟ್ಟಿಮನಿ ನೇತೃತ್ವದಲ್ಲಿ ಮೂರು ತಂಡ ರಚನೆಯಾಗಿದೆ. ಒಟ್ಟು 8 ಆರೋಪಿಗಳ ಪೈಕಿ ಐವರ ಬಂಧನವಾಗಿರುವ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಮೂವರು ಆರೋಪಿಗಳಿಗೆ ತಲಾಷ್ ನಡೆಸಲಾಗಿದೆ.
ಹೆಚ್ಚಿನ ತನಿಖೆಗಾಗಿ ಕೋರ್ಟ್ ನಿಂದ ಅನುಮತಿ ಪಡೆದು ಆರೋಪಿಗಳನ್ನ ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ತನಿಖೆ ನಡೆಸಲಾಗುವದು ಎಂದರು.