ಅಯ್ಯಪ್ಪಸ್ವಾಮಿ ಸಂಭ್ರಮದ ಮಂಡಲ ಪೂಜೆ

26 MANJU 04 (1)
Published on
ಅಯ್ಯಪ್ಪಸ್ವಾಮಿ ಸಂಭ್ರಮದ ಮಂಡಲ ಪೂಜೆ
* ಹೊಸಪೇಟೆ, ಕಮಲಾಪುರದಲ್ಲಿ ಅದ್ದೂರಿ ಮೆರವಣಿಗೆ
ವಿಜಯವಾಣಿ ಸುದ್ದಿಜಾಲ ಹೊಸಪೇಟೆ
ನಗರದ ನೆಹರೂ ಕಾಲೋನಿಯ ಶ್ರೀ ಅಯಪ್ಪ ಸ್ವಾಮಿ ದೇಗುಲದಲ್ಲಿ ಗುರುವಾರ ಮಂಡಲ ಪೂಜಾ ವಿಶೇಷ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿದವು.
ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ದೇಗುಲದ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಕಳಾಶಾಭಿಷೇಕ ಅಷ್ಟಾಭಿಷೇಕ, ವಿಶೇಷ ಅಲಂಕಾರ ಗೈದು ಪೂಜೆಯನ್ನು ನೆರವೇರಿಸಲಾಯಿತು. ಪ್ರಧಾನ ಆರ್ಚಕ ಶಂಕರನ್ ಎನ್.ನಂಬೂದರಿ ಅವರು ವಿಶೇಷ ಪೂಜೆವನ್ನು ನೆರವೇರಿಸಿದರು.
ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಸಹಸ್ರಾರು ಭಕ್ತರು, ಬೆಳಿಗ್ಗೆಯಿಂದ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಹೂ-ಹಣ್ಣು, ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಬಳಿಕ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕಾರ ಮಾಡಿದರು.
ಮಂಡಲ ಪೂಜಾ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪ ಸ್ವಾಮಿಯ ಮೂರ್ತಿಯ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ದಾರಿಯುದಕ್ಕೂ ಅಯ್ಯಪ್ಪ ಮಾಲಾಧಾರಿಗಳು, ಭಕ್ತರು ಅಯ್ಯಪ್ಪ ಸ್ವಾಮಿ ಭಜನೆ ಗೀತೆಗಳನ್ನು ಹಾಡಿ ಹೆಜ್ಜೆ ಹಾಕಿದರು.
ನಗರದ ಪಟೇಲ್ ನಗರದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪುನೀತ್ ರಾಜಕುಮಾರ್ ವೃತ್ತ, ಮದಕರಿನಾಯಕ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ದೇಗುಲದಲ್ಲಿ ಸಂಪನ್ನಗೊಂಡಿತು.

ಕಮಲಾಪುರ

ತಾಲೂಕಿನ ಕಮಲಾಪುರದಲ್ಲಿ ಗುರುವಾರ ಅಯ್ಯಪ್ಪಸ್ವಾಮಿ ಮಂಡಲ ಪೂಜೆ ನಿಮಿತ್ತ ಮೆರವಣಿಗೆ ನಡೆಯಿತು.
ಅಯ್ಯಪ್ಪಸ್ವಾಮಿ ದೇಗುಲದಿಂದ ಆರಂಭವಾದ ಮೇರವಣಿಗೆ ಹಿರೆಕೇರಿ, ತಿಮ್ಮನಾಥಕೇರಿ, ಮನ್ಮಥಕೇರಿ, ಚೌಡಿಕೇರಿ, ಕೃಷ್ಣ ದೇವರಾಯ ವೃತ್ತ, ಊರಮ್ಮಗುಡಿ ಬಯಲು, ಗೋನಾಳ್ ಕೇರಿ, ವಾಲ್ಮೀಕಿ ವೃತ್ತ, ಎಚ್ ಪಿಸಿ ರಸ್ತೆಯ ಮರೆಮ್ಮ ದೇಗುಲ ಮಾರ್ಗವಾಗಿ ಪುನಃ ಅಯ್ಯಪ್ಪ ಸ್ವಾಮಿ ದೇಗುಲದ ವರೆಗೆ ಮೆರವಣಿಗೆ ನಡೆಯಿತು.  ಮಂಡಲ ಪೂಜೆ ನಿಮಿತ್ತ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಗುರುಸ್ವಾಮಿಗಳಾದ ಶ್ರೀನಿವಾಸ್, ಆದಿಶೇಷ, ಗಣೇಶ್, ಭದ್ರಸ್ವಾಮಿ, ಬಳೆಗಾರ್ ಶ್ರೀನಿವಾಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net