

ಹೊಸಪೇಟೆ: ರಾಷ್ಟಿçÃಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಅಂಧತ್ವ ಪ್ರಮಾಣ ದರವನ್ನು ಇಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆಶಾಕಿರಣ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಒಟ್ಟು 12 ದೃಷ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸೇವೆ ಆರಂಭಿಸಲಾಗಿದೆ ಎಂದು ಡಿಎಚ್‌ಒ ಡಾ.ಎಲ್.ಆರ್.ಶಂಕರ ನಾಯ್ಕ ಹೇಳಿದರು.,
ನಗರದ ಉಪವಿಭಾಗಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ನೂತನ ಆಶಾಕಿರಣ ದೃಷ್ಟಿಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಲ್ಲಿ ಕಣ್ಣಿನ ಪೊರೆ ಮತ್ತು ವಕ್ರೀಕಾರಕ ದೋಷಗಳಿಂದ ದೃಷ್ಟಿ ಸಮಸ್ಯೆಗಳ ಸಂಭವನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈಗಾಗಲೇ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದೃಷ್ಟಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕ್ಷೇತ್ರ ಸಿಬ್ಬಂದಿಗಳಾದ ಆಶಾ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ದಿನನಿತ್ಯದ ಚಟುವಟಿಕೆಯಡಿಯಲ್ಲಿ ಮನೆಗೆ ಭೇಟಿ ನೀಡಿ ಜನರ ಪ್ರಾಥಮಿಕ ತಪಾಸಣೆ ನಡೆಸಬೇಖು ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ದೃಷ್ಠಿ ಕೇಂದ್ರಗಳಿಗೆ ಹೋಗಲು ಸಲಹೆ ನೀಡಲಿದ್ದಾರೆ. ದೃಷ್ಠಿ ಕೇಂದ್ರಗಳಲ್ಲಿ ಅಗತ್ಯವಿದ್ದ ಫಲಾನುಭವಿಗಳಿಗೆ ಪರೀಕ್ಷೆ ನಡೆಸಿ ಉಚಿತವಾಗಿ ಕನ್ನಡಕಗಳನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ ಅಗತ್ಯ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕೆ.ರಾಧಿಕಾ, ಜಿಲ್ಲಾ ಕ್ಷಯರೋಗ ನಿರ್ಮೂಲಾಧಿಕಾರಿ ಡಾ.ಡಿ.ಭಾಸ್ಕರ್, ಮುಖ್ಯ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ವೈದ್ಯಾರಾದ ಡಾ.ರಾಜಶೇಖರ್, ಡಾ.ರಾಘವೇಂದ್ರ, ಡಾ.ಕೊಟ್ರೇಶ್ ಇತರರಿದ್ದರು.