

ಮರಿಯಮ್ಮಹಳ್ಳಿ: ತಾಲೂಕು ಮರಿಯಮ್ಮನಹಳ್ಳಿ ಹೋಬಳಿಯ ವಿವಿಧಕಡೆ ಶನಿವಾರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭೇಟಿ ಪರಿಶೀಲನೆ ನಡೆಸಿದರು.
ತಿಮ್ಮಲಾಪುರ ಗ್ರಾಮದಲ್ಲಿನ ಶ್ರೀ ವೇಣುಗೋಪಾಲ ಸ್ವಾಮಿ ಹಾಗೂ ತ್ರಿಕೂಟೇಶ್ವರ ದೇಗುಲಗಳಿಗೆ ಭೇಟಿದರು. ಈ ದೇಗುಲಗಳು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೊಳಪಡುತ್ತಿದ್ದು ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶೀಥಿಲಾವಸ್ಥೆಗೆ ತಲುಪುತ್ತಿರುವ ಸದರಿ ದೇಗುಲಗಳನ್ನು ಸಂರಕ್ಷಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರು ಈ ಹಿಂದಿನಿAದಲೂ ಈ ದೇಗುಲದ ಪ್ರದೇಶದಲ್ಲಿ ಮದುವೆ ಸಮಾರಂಭಗಳನ್ನು ನಡೆಸುತ್ತಾ ಬಂದಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಇದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಮನವಿ ಮಾಡಿದ್ದಕ್ಕೆ ಮದುವೆಗೆ ಅವಕಾಶ ನೀಡುವಂತೆ ತಕ್ಷಣವೇ ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರಿಗೆ ಸದರಿ ಪುರಾತನ ಸ್ಮಾರಕಗಳ ವೀಕ್ಷಣೆಗೆ ಹಾಗೂ ದೇಗುಲಕ್ಕೆ ಬರುವಂತಹ ಭಕ್ತಾಧಿಗಳಿಗೆ ಅವಶ್ಯವಿರುವ ರಸ್ತೆ ಸಂಪರ್ಕ & ಸ್ಮಾರಕಗಳ ವಿವರಣೆಯುಳ್ಳ ನಾಮಫಲಕಗಳನ್ನು ಹಾಕುವಂತೆ ಸೂಚಿಸಿದರು.
ತಾಲೂಕಿನ ತಿಮಲಾಪುರ ಗ್ರಾಮದ ಸರ್ಕಾರಿ ಅಂಗನವಾಡಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದರು. ಅಂಗನವಾಡಿ ಕೇಂದ್ರಕ್ಕೆ ಪೂರೈಕೆಯಾಗುತ್ತಿರುವ ಆಹಾರ ಗುಣಮಟ್ಟವನ್ನು ಪರಿಶೀಲಸಿದರು. ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕೊರತೆ ಆಗದಂತೆ ಗಮನಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.