ಖಾಯಂ ಮಾಡಿ ನ್ಯಾಯಾ ಕೊಡಿ

03 MANJU 04
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0166,0.0001; brp_del_sen:0.1300,0.1300; motionR: 0; delta:1; bokeh:1; module: photo;hw-remosaic: false;touch: (0.5114818, 0.59274226);sceneMode: 7864320;cct_value: 0;AI_Scene: (-1, -1);aec_lux: 156.47107;aec_lux_index: 0;albedo: ;confidence: ;motionLevel: 0;weatherinfo: null;temperature: 39;
Published on

ಹೊಸಪೇಟೆ: ಖಾಯಂ ಮಾಡಿಕೊಳ್ಳುವಂತೆ ಒತ್ತಾಯಿಸಿ ಕೇಂದ್ರ ಪುರಾತತ್ವ ಇಲಾಖೆಯ ತೋಟಗಾರಿಕೆ ವಿಭಾಗದ ಹೊರಗುತ್ತಿಗೆ ದಿನಗೂಲಿ ನೌಕರರು ತಾಲೂಕಿನ ಕಮಲಾಪುರದ ಎಎಸ್‌ಐ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಹಂಪಿ ವಿಭಾಗದ ಕೇಂದ್ರ ಪುರಾತತ್ವ ಇಲಾಖೆಯ ಆಧೀನದಲ್ಲಿ ಬರುವ ತೋಟಗಾರಿಕೆ ವಿಭಾಗದಲ್ಲಿ ಸುಮಾರು 36 ಕಾರ್ಮಿಕರು ಕಳೆದ 30 ವರ್ಷಗಳಿಂದ ಸೇವೆಯನ್ನು ಸಲ್ಲಿಸತ್ತಿದ್ದಾರೆ. ಈ ಹಿಂದೆ ಫೋರ್‌ಮೆನ್ ಪ್ರಭಾವತಿ ಅವರ ಅವಧಿಯಲ್ಲಿ 2022ರ ಜನವರಿ ಮತ್ತು ಫೆಬ್ರುವರಿ ತಿಂಗಳ ವೇತನ ಹಾಗೂ ಪ್ರದೀಪ್ ತೋಟಗಾರಿಕಾ ಅಧಿಕಾರಿ ಇವರ ಅವಧಿಯಲ್ಲಿ 2022ರ ಜುಲೈ ಮತ್ತು ಆಗಸ್ಟ್ ಮತ್ತು 2023ರ ಏಪ್ರೀಲ್ ತಿಂಗಳ ವೇತನ ಈ ವರೆಗೆ ಪಾವತಿಯಾಗಿಲ್ಲ. ಕಳೆದ 10 ವರ್ಷಗಳಿಂದ ಪಿಎಫ್ ಹಣ ಸಂದಾಯವಾಗಿಲ್ಲ. ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದರೂ ಕ್ರಮವನ್ನು ಕೈಗೊಂಡಿಲ್ಲ. ಇಲಾಖೆಯಿಂದ ನೇರವಾಗಿ ನಮ್ಮ ಖಾತಗಳಿಗೆ ಪಾವತಿ ಆಗುತ್ತಿತ್ತು. 2018 ನಂತರ ಗುತ್ತಿಗೆದಾರರು ಎಂದು ಅಧಿಕಾರಿಗಳು ಸಬೂಬು ಹೇಳಿ ನಮ್ಮದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಗ್ರಹಿಸಿದರು.

ಕಳೆದ ಮುರು ವರ್ಷದ ಹಿಂದೆ ಪುರಾತತ್ವ ಇಲಾಖೆಯ ತೋಟಗಾರಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರತು ಪಡಿಸಿ ಇತರೆ ವಿಭಾಗದ ದಿನಗೂಲಿ ನೌಕರರನ್ನು ಇಲಾಖೆಯಿಂದ ನೇಮಕವಾಗಿದೆ. ಕೆಲವೇ ದಿನಗಳಲ್ಲಿ ತೋಟಗಾರಿಕೆಯಲ್ಲಿ ಕೆಲಸ ಮಾಡುವ ದಿನಗುಲಿಗಳಿಗೆ ಇಲಾಖೆ ನೇಮಕ ಮಾಡಿಕೊಳ್ಳುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಆದರೆ, ಈಗ ಗುತ್ತಿಗೆದಾರರಿಲ್ಲ ನೀವು ಕೆಲಸಕ್ಕೆ ಬರಬೇಡಿ ಎನ್ನುತ್ತಿದ್ದಾರೆ. 30 ವರ್ಷಗಳಿಂದ ಈ ಇಲಾಖೆಯನ್ನು ನಂಬಿರುವ ಕುಟುಂಬಗಳು ಬೀದಿ ಪಾಲಾಗಲಿದ್ದಾರೆ. ನಮ್ಮ ಕೂಡ ಖಾಯಂ ನೌಕರರಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ವಿರೇಶ್, ಅನುಸೂಯ, ಅಂಬಮ್ಮ, ಮಂಜುಳ, ಮರಿಯಮ್ಮ, ಮಹಾದೇವಿ, ಗಂಗಮ್ಮ, ಸಾವಿತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net