ಹೊಸಪೇಟೆ: ಹಂಪಿಯ ವಿರೂಪಾಕ್ಷ ದೇಗುಲದ ಬಳಿ ಸುಮಾರು 60-65 ವರ್ಷದ ವ್ಯಕ್ತಿಯೋರ್ವ ಕುಸಿದು ಬಿದ್ದಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ರವಾನಿಸಲಾಗಿತ್ತು, ನಾಲ್ಕು ದಿನದ ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಂಪಿ ಪ್ರವಾಸಿ ಠಾಣಾಧಿಕಾರಿ ಶಿವಕುಮಾರನಾಯ್ಕ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಡಿಎಸ್‌ಪಿ ರವರ ದೂ.ಸಂ: 08394-24204, ಸಿಪಿಐ ರವರ ದೂ.ಸಂ: 08394-241530 ಪಿಎಸ್‌ಐ ರವರ ದೂ.ಸಂ: 08394-241530, ಎಸ್‌ಪಿರವರ ಮೊ.ಸಂ: 9480805700 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.