

ಹೊಸಪೇಟೆ: ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯಿಂದ ಶಾದಿಮಹಲ್ ಆವರಣದಲ್ಲಿ ಭಾನುವಾರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಹುಡಾ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಜೀವನದಲ್ಲಿ ಅಂಕಗಳೇ ಅಂತಿಮ ಅಲ್ಲ. ವಿದ್ಯಾಭ್ಯಾಸದ ಪಠ್ಯೇತರ ಚಟುವಟಿಕೆಗಳ ತಮ್ಮ ಪ್ರತಿಭೆಯನ್ನು ಅನಾವರಣಗೊಸಬೇಕು. ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟ ಸೌಲಭ್ಯಗಳನ್ನು ಒದಗಿಸಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣದಲ್ಲಿ ಸಾಧನೆ ಮಾಡಬೇಕು. ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮವಹಿಸಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ನಾಣ್ಣುಡಿಯಂತೆ ಮಕ್ಕಳ ಒಳಗಿರುವ ಪ್ರತಿಭೆಯನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಸಹ ಅನಾವಶ್ಯಕ ಸಮಯವನ್ನ ವ್ಯರ್ಥ ಮಾಡದೆ ಮೊಬೈಲ್ ಹಾಗೂ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕು.
ಪ್ರಮುಖರಾದ ಫೈರೋಜ್ ಖಾನ್, ಅನ್ಸರ್ ಬಾಷ, ಡಾ.ದುರ್ವೇಶ್ ಮುಯೂದ್ದೀನ್, ಎಂ.ಡಿ.ಸಿರಾಜ್ ಸಾಬ್, ಎಚ್.ಎನ್.ಎಫ್.ಅಲಿ ಬಾಬು ನಿಯಾಜಿ, ಅಬ್ದುಲ್ ಖಾದರ್ ರಫಾಯಿ ಇತರರಿದ್ದರು.