ಸಾಯಿಬಾಬಾ ಮೂರ್ತಿ ತೆರವು ಖಂಡನೆ

04 MANJU 05
Published on

ಹೊಸಪೇಟೆ: ಉತ್ತರ ಪ್ರದೇಶದ ಲಖನೌದಲ್ಲಿ ಸಾಯಿಬಾಬಾ ಮೂರ್ತಿಯನ್ನು ದೇವಸ್ಥಾನದಿಂದ ತೆರವುಗೊಳಿಸಿರುವ ಸನಾತನ ಧರ್ಮದ ಎಸ್‌ಆರ್‌ಡಿ ಸಂಘಟನೆಯ ಕ್ರಮವನ್ನು ಸೌಹಾರ್ದ ಕರ್ನಾಟಕದ ವಿಜಯನಗರ ಜಿಲ್ಲಾ ಘಟಕ ಖಂಡಿಸಿದೆ ಎಂದು ಸಂಚಾಲಕ ಎ.ಕರುಣಾನಿಧಿ ಹೇಳಿದರು.

ನಗರದ ರೈಲ್ವೆ ಸ್ಟೇಶನ್ ರಸ್ತೆಯಲ್ಲಿರುವ ಸಾಯಿಬಾಬಾ ದೇಗುಲದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಯಿಬಾಬಾ ದೀನ ದಲಿತರ ಪರವಾಗಿ ತಮ್ಮ ಜೀವನವನ್ನೆ ಸಮರ್ಪಿಸಿದ್ದಾರೆ. ಸಬ್ ಕಾ ಮಾಲಿಕ್ ಏಕ್ ಹೈ ಎನ್ನುವ ತತ್ವವನ್ನು ಮೈಗೂಡಿಸಿಕೊಂಡ್ಡಿದ್ದ ಬಾಬಾ, ಜಾತಿ, ಮತ, ಧರ್ಮಗಳ ನಡುವೆ ಭಿನ್ನ- ಭೇದಗಳನ್ನು ತಿರಸ್ಕರಿಸಿ ಎಲ್ಲರೂ ಒಂದಾಗಿ ಬದುಕಬೇಕು ಎಂದು ಕರೆ ನೀಡಿದ್ದರು. ಆದರೆ ಮತೀಯವಾದಿಗಳು, ಸನಾತನಿಗಳು ಸಾಯಿಬಾಬಾರ ಮೂರ್ತಿಯನ್ನು ತೆರವುಗೊಳಿಸಿರುವ ಕ್ರಮವು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ನೀಡಿದ ಗಂಡಾAತರವಾಗಿದ್ದು, ಸಾಯಿಬಾಬಾ ಭಕ್ತರಿಗೆ ನೀಡಿದ ಬೆದರಿಕೆಯಾಗಿದೆ. ಸಾ¬ ಭಕ್ತರು ಸನಾತನ ಧರ್ಮದವರ ಬೆದರಿಕೆಯನ್ನು ತಿರಸ್ಕರಿಸಬೇಕು ಎಂದರು.

ಮುಖAಡರಾದ ವೈ.ರಾಮಚಂದ್ರ ಬಾಬು ಮಾತನಾಡಿ, ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಾಯಿಬಾಬಾ ಭಕ್ತರು ಬಾಬಾರವರ ಆರಾಧಕರಿದ್ದಾರೆ. ಅವರೆಲ್ಲರೂ ತಮ್ಮ ಹೃದಯದಲ್ಲಿ ಬಾಬಾರವರನ್ನು ಆರಾಧಿಸುತ್ತಿದ್ದಾರೆ. ಸನಾತನ ಧರ್ಮೀಯರಿಗೆ ಬಾಬಾನ ಭಕ್ತರ ಹೃದಯದ ಭಾವನೆಗಳನ್ನು ಘಾಸಿಗೊಳಿಸುವ ಅಧಿಕಾರವಿಲ್ಲ, ಸನಾತನ ಧರ್ಮದವರು ಹೀಗೆಯೇ ಮುಂದುವರೆದರೆ ಬಾಬಾನ ಭಕ್ತರು ಹೋರಾಟಕ್ಕೆ ಮುಂದಾದಬೇಕಾಗುತ್ತದೆ ಎಂದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ಪರಮಾನಂದ ಜನ್ಯಾಜಿ ಮಾತನಾಡಿದರು. ವಕೀಲ ಮುನೀರ್ ಬಾಷಾ, ಪ್ರಮುಖರಾದ ಎಂ.ಜAಬಯ್ಯನಾಯಕ, ತಾಯಪ್ಪ ನಾಯಕ, ಭಾಸ್ಕರ್ ರೆಡ್ಡಿ, ಸ್ವಾಮಿ, ಮಂಜುನಾಥ, ತಿರುಕಪ್ಪ, ವಕೀಲರಾದ ಮರಿಯಪ್ಪ, ಪವನ್, ರಮೇಶ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net