

ಹೊಸಪೇಟೆ: ಇಲ್ಲಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಚಿತವಾಡಗಿ 1ನೇ ವಲಯದ ಹೊಸೂರು 1 ಮತ್ತು 2ನೇ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿಯತ್ತ ಸಮುದಾಯ ಪಾಲಕ ಪೋಷಕರ ಸಭೆ ಗುರುವಾರ ನಡೆಯಿತು.
ಗ್ರಾ.ಪಂ. ಸದಸ್ಯ ಸಣ್ಣಕ್ಕಿ ಲಕ್ಷ್ಮಣ ಅಂಗನವಾಡಿಗಳಿಗೆ ನೀಡಿದ ಸ್ಮಾರ್ಟ್ ಟಿವಿಗೆ ಹೊಸೂರು ಗ್ರಾ.ಪಂ. ಅಧ್ಯಕ್ಷೆ ಜಯಪದ್ಮಾ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ ವಿತರಣೆಗೆ ಕ್ರಮ ವಹಿಸಲಾಗುದು. ಅಂಗನವಾಡಿ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಸಿಡಿಪಿಒ ಸಿಂದೂ ಯಲಿಗಾರ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಕೆ ಬರುವಂತಹ ಮಕ್ಕಳ ಕಲಿಕೆಗೋಸ್ಕರ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸಮುದಾಯದ ಪಾಲ್ಗೊಳ್ಳುವಿಕೆಯು ಅತ್ಯಂತಹ ಮಹತ್ವದ್ದಾಗಿದೆ. ಸಮುದಾಯವು ಯಾವಾಗ ಮಕ್ಕಳ ಕಲಿಕೆಗೆ ಹಾಗೂ ಅಂಗನವಾಡಿ ಅಭಿವೃದ್ಧಿಗೆ ಶ್ರಮಿಸುತ್ತದೆ ಆಗ ಮಕ್ಕಳ ಕಲಿಕೆ ಸಧೃಡವಾಗುತ್ತೆ. ಇದರ ಜತೆ ಅಂಗನವಾಡಿಯು ಸಹ ಬೆಳೆಯುತ್ತೆ ಎಂದರು. ಗ್ರಾ.ಪA. ಸದಸ್ಯರು ಸಣ್ಣಕ್ಕಿ ಲಕ್ಷ್ಮಣ, ಮೇಲ್ವಿಚಾರಕಿ ಎಲ್.ಡಿ.ನಧಾಫ್, ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಅಧಿಕಾರಿ ಕೊಟ್ರೇಶ ಯರಡಕೇರಿ, ಹಲೋ ಪೋಷಕರೆ ಕಾರ್ಯಕ್ರಮದ ಸಂಯೋಜಕ ಅರ್ಜುನ್, ಅಂಗನವಾಡಿ ಕಾರ್ಯಕರ್ತೆಯರಾದ ನೇತ್ರಾವತಿ, ಯಶೋದಾ ಇತರರಿದ್ದರು.