ನಿವೃತ್ತಿ ವೇತನ ಹಾಗೂ ಎನ್‌ಪಿಎಸ್ ಬಿಡುಗಡೆ ಮಾಡಿ

nps
ಹೊಸಪೇಟೆಯಲ್ಲಿ ನಿವೃತ್ತಿ ವೇತನ ಹಾಗೂ ಎನ್ಪಿಎಸ್ ಬಿಡುಗಡೆ ಮಾಡಿಸಬೇಕು ಎಂದು ಸಮೂಹ ಶಕ್ತಿ ಸಂಘಟನೆಯಿAದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
Published on

ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನಿವೃತ್ತಿ ವೇತನ ಹಾಗೂ ಎನ್‌ಪಿಎಸ್ ಬಿಡುಗಡೆ ಮಾಡಿಸಬೇಕು ಎಂದು ಸಮೂಹ ಶಕ್ತಿ ಸಂಘಟನೆಯಿAದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಾಲೂಕಿನ ನಾನಾ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿ ಸುಮಾರು 4ರಿಂದ 5 ವರ್ಷಗಳು ಕಳೆದರೂ ಈ ವರೆಗೆ ಅವರಿಗೆ ಸಂದಾಯವಾಗಬೇಕಿದ್ದ ನಿವೃತ್ತಿ ವೇತನ ಹಾಗೂ ಎನ್‌ಪಿಎಸ್ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಹಲವಾರು ಬಾರಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಈವೆರೆಗೆ ಸ್ಪಂದಿಸಿಲ್ಲ ಎಂದು ದೂರಿದರು.

ಕಳೆದ 30ರಿಂದ 35 ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಅವರಿಗೆ ಇಳಿ ವಯಸ್ಸಿನಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಅವರಿಗೆ ದಿನನಿತ್ಯದ ಔಷಧಿ ವೆಚ್ಚಗಳನ್ನು ಭರಿಸುವುದು ಕಷ್ಟಕರವಾಗಿದೆ. ನಿವೃತ್ತಿ ವೇತನಕ್ಕಾಗಿ ಕಚೇರಿಗೆ ಅಲೆದಾಡಿ ಸಾಕಾಗಿದ್ದಾರೆ. ಇವರ ಬದುಕು ದುಸ್ಥಿತಿಯಲ್ಲಿರುವುದರಿಂದ ಕೂಡಲೇ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಕೂಡಲೇ ಹಣ ಪಾವತಿ ಮಾಡಿಸಬೇಕೆಂದು ಒತ್ತಾಯಿಸಿದರು.

ತಾಲೂಕಿನ ಮರಿಯಮ್ಮನಹಳ್ಳಿ, ಗರಗ ನಾಗಲಾಪುರ, ಹಾರೋವನಹಳ್ಳಿ, ಚಿಲಕನಹಟ್ಟಿ, ಡಣನಾಯಕನಕೆರೆ, ಗೊಲ್ಲರಹಳ್ಳಿ ಸೇರಿ ನಾನಾ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರು ನಿವೃತ್ತಿ ವೇತನ ಬಿಡುಗಡೆಯಾಗದೇ ಇರುವುದರಿಂದ ಜೀವನ ನಡೆಸಲು ಆಗದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.

ಸಂಘಟನೆಯ ದೇವರಾಜ ಪೋತಲಕಟ್ಟೆ, ಸಂಪತ್, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net