ಆಂದ್ರದಲ್ಲಿ ಸಿಐಡಿ ತನಿಖೆ ಚುರುಕು

Published on

ಹೊಸಪೇಟೆ: ಜೆನ್ನಿ ಮಿಲ್ಕ್ ಕಂಪನಿ (ಕತ್ತೆ ಹಾಲು ಮಾರಾಟ) ವಂಚನೆ ಪ್ರಕರಣದ ಬೆನ್ನುಬಿದ್ದಿರುವ ಸಿಐಡಿ ಅಧಿಕಾರಿಗಳ ತಂಡ ಆಂಧ್ರಪ್ರದೇಶಕ್ಕೆ ತೆರಳಿದ್ದು, ತನಿಖೆ ಚುರುಕುಗೊಳಿಸಿದೆ.

ಸಿಐಡಿ ಕಲಬುರಗಿ ಘಟಕದ ಡಿವೈಎಸ್ಪಿ ಅಸ್ಲಂ ಬಾಷಾ ನೇತೃತ್ವದ ತಂಡ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಬೀಡುಬಿಟ್ಟಿದ್ದು, ಮಾಹಿತಿ ಕಲೆ ಹಾಕುತ್ತಿದೆ. ಈಗಾಗಲೇ ಪ್ರಕರಣದ ಎ-4 ಆರೋಪಿಯಾಗಿರುವ ಹರ್ಷವರ್ಧನರಾಜುನನ್ನು ನ್ಯಾಯಾಲಯದಿಂದ ಕಸ್ಟಡಿಗೆ ಪಡೆದು ಸಿಐಡಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಸಿಐಡಿ ತಂಡ ಕಲೆಹಾಕಿರುವ ಮಾಹಿತಿಗಳ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗುತ್ತಿದೆ. ಇನ್ನೂ ಪ್ರಕರಣಕ್ಕೆ ಸಂಬAಧಿಸಿದAತೆ ಕೆಲ ಮಹತ್ವದ ಮಾಹಿತಿಗಳ ಕುರಿತು ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಆಧಾರದ ಮೇಲೆ ತನಿಖೆಯನ್ನು ನಗರ ಹಾಗೂ ಆಂಧ್ರಪ್ರದೇಶದಲ್ಲಿ ಏಕ ಕಾಲದಲ್ಲಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net