

ಹೊಸಪೇಟೆ: ಹೆದ್ದಾರಿ ಪ್ರಾಧಿಕಾರ 2013-14ರಲ್ಲಿ ರಸ್ತೆ ಅಗಲಿಕರಣದ ಮಾಡುವ ವೇಳೆ ಪರಿಹಾರ ನೀಡಿಲ್ಲ. 2017ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವದ ವೇಳೆ ನಿವೇಶನ ಹಾಗೂ ಮನೆ ಕಟ್ಟಿಸಿಕೊಡುತ್ತೇವೆ ಎಂಬ ಭರವಸೆ ಶಾಸಕರು ನೀಡಿದರು ಎಂದು ಅನಂತಾಶಯನಗುಡಿಯ ಸಂತ್ರಸ್ತರು ಒತ್ತಾಯಿಸಿದರು.
ನಗರದ ಒಳಂಗಣ ಕ್ರೀಡಾಂಗಣದಲ್ಲಿ ಶನಿವಾರ ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆಯಲ್ಲಿ ನಗರದ ಅನಂತಾಶಯನಗುಡಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಭೂ ಸ್ವಾಧೀನ ಸಭೆ ನಡೆಯಿತು.
ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಮಾತನಾಡಿ, ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ 52 ಮನೆಗಳು ಹಾಗೂ ವಾಣಿಜ್ಯ ಕಟ್ಟಗಳ ತೆರವು ಕಾರ್ಯಚರಣೆ ನಡೆಯಲಿದೆ. ಈಗಾಗಲೇ ಸರ್ವೆಕಾರ್ಯ ನಡೆದಿದೆ. ಖಾಲಿ ಇರುವ ಸರ್ಕಾರಿ ಜಮೀನುಗಳಿಗೆ ಪರಿಹಾರ ಇಲ್ಲ ಸಿಗುವುದಿಲ್ಲ. ಕಟ್ಟಡಗಳಿಗೆ ಮಾತ್ರ ನಿಯಾಮಾನುಸಾರವಾಗಿ ಪರಿಹಾರ ಸಿಗಲಿದೆ. ನಗರಸಭೆ ಪ್ರಕಾರ ದಾಖಲೆಗಳಿದ್ದರೆ ಮಾತ್ರ ಪರಿಹಾರ ನೀಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯೇ ನೀಡಿದ ಮುಖಂಡ ಅಯ್ಯಳ್ಳಿ ತಿಮ್ಮಪ್ಪ ಮಾತನಾಡಿ, ನಮ್ಮ ಅಜ್ಜ ಮುತ್ತಜ್ಜ ಅವರ ಕಾಲದಿಂದಲ್ಲೂ ಅಲ್ಲೇ ವಾಸ ಇದ್ದೇವೆ. ಇಲ್ಲಿ ಬಹುತೇಕರು ಕುಲಿ ಕಾರ್ಮಿಕರು, ಬಡವರು ಇದ್ದಾರೆ. ಈ ಹಿಂದೆ ಅರಸ್ತೆ ಅಗಲಿಕರಣದ ವೇಳೆ ಕಾಮಗಾರಿ ಆರಂಭಕ್ಕೂ ಮುನ್ಮ ಪರಿಹಾರ ಕೊಡುತ್ತವೆ ಎಂದು ಭರವಸೆ ನೀಡಿದರು. ಆದರೆ, ಅದು ಭರವಸೆಯಾಗಿ ಉಳಿದಿದೆ ಎಂದು ಆಗ್ರಹಿಸಿದರು.
ನಗರಸಭೆಗೆ ತೆರಿಗೆ ಕಟ್ಟುತ್ತಿದ್ದೇವೆ. ಡೋರ್ ನಂಬರ್ ಕೂಡ ಇದೆ. ವಿಜಯನಗರ ಅರಸರ ಕಾಲದಿಂದಲ್ಲೂ ಇಲ್ಲೇ ಇದ್ದೆವೆ ಎಂಬ ಇತಿಹಾಸ ಇದೆ. ಆದ್ದರಿಂದ ಸಣ್ಣಪುಟ್ಟ ಪರಿಹಾರದ ಬದಲಾಗಿ ನಿವೇಶನ ಹಂಚಿಕೆ ಮಾಡಬೇಕು. ಸಪ್ತಗಿರಿ ಆಂಜನೇಯ ದೇಗುಲಕ್ಕೆ ಹೋಗುವುದಕ್ಕೆ ಅಂಡರ್ ಪಾಸ್ ಮಾಡಬೇಕು. ರಥ ನಿಲ್ಲಿಸಲು ಸ್ಥಳಾವಕಾಶ ಮಾಡಬೇಕು. ಆದಷ್ಟು ಬೇಗ ಪರಿಹಾರ ಮಾಡಿ, ಕಾಮಗಾರಿ ಬೇಗ ಮುಗಿಸಿ. ಇಲ್ಲಿ ನಡೆಉವ ಸಾವು ನೋವುಗಳನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಮೇಲೇತುವೆ ಕಾಮಗಾರಿಗಾಗಿ ಕಳೆದ ಬಾರಿ ಎಲ್ಲ ಸಮಸ್ಯೆ ಪರಿಹಾರಕ್ಕಾಗಿ ಮಾತನಾಡಿದ್ದೆವೆ. ಕೇಂದ್ರ ಸರ್ಕಾರದಿಂದ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುತ್ತಿದೆ. ಎಷ್ಟು ಬೇಕೋ ಅಷ್ಟು ಅಷ್ಟು ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಗಲಿದೆ. ಆದ್ದರಿಂದ ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನಗರದ ಹೊರವಲಯದ ಜಂಬುನಾಥನ ಹಳ್ಳಿ ಬಳಿ 30*40 ಅಡಿಯ ನಿವೇಶ ಹಂಚಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.