

ಹೊಸಪೇಟೆ: ಇವತ್ತಿಗೂ ಭಾರತ ಮತ್ತು ಪಾಕಿಸ್ತಾನದ ಜನರು ಪ್ರೀತಿ ಮಾಡುವ ಕವಿಯತ್ರಿ ಪಂಜಾಬಿನ ಪ್ರಖ್ಯಾತ ಅಮೃತ ಪ್ರೀತಮ್ ಅವರು. ಇವರು ದೆಹಲಿಯಲ್ಲಿ ವಾಸವಾಗಿದ್ದಾಗ ಜನರು ಇವರ ಉಡುಗೆ ತೊಡುಗೆಯನ್ನು ನೋಡಿ ನಡೆದಾಡುವ ತಾಜ್ ಮಹಲ್ ಎಂದು ಕರೆಯುತ್ತಿದ್ದರು ಎಂದು ನವದೆಹಲಿಯ ಸಾಹಿತಿ ರೇಣುಕಾ ನಿಡುಗುಂದಿ ಹೇಳಿದರು.
ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಮತ್ತು ಹಸ್ತಪ್ರತಿಶಾಸ್ತç ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಮೃತಾ ಪ್ರೀತಮ್ ಅವರ ನೆನಪುಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೃತ ಪ್ರೀತಮ್ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಆಸ್ಪದ ಕೊಡದೆ, ಸಮಾಜದ ಒಳತಿಗೆ ತಮ್ಮ ಬರಹಗಳ ಮೂಲಕ ಹೋರಾಡಿದವರು. ಇವರು ಹಿಂದೂ ಮುಸ್ಲಿಂ ಎಂಬ ಜಾತ್ಯಾತೀತ ತೊರೆದು ಎಲ್ಲರೂ ಒಂದೇ ಎಂಬ ಭಾವವನ್ನು ವ್ಯಕ್ತಪಡಿಸುತ್ತಿದ್ದರು. ಭಾರತ ಮತ್ತು ಪಾಕಿಸ್ತಾನದ ವಿಭಜನೆ ಸಮಯದಲ್ಲಿ ಅವರು ಭಾರತ-ಪಾಕಿಸ್ತಾನಗಳೆರಡರ ಗಡಿಗಳ ಬಗ್ಗೆ ಸಮಾನ ಒಲವು ಹೊಂದಿದ್ದರು. ಇವರ ಬರಹಗಳು ಕೇವಲ ಒಂದು ರಾಷ್ಟçಕ್ಕೆ ಸೀಮಿತವಾಗಿ, ಏಷ್ಯಾ ಖಂಡಕ್ಕೆ ಪ್ರಭಾವಿತಗೊಂಡಿವೆ ಎಂದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಅಮೃತ ಪ್ರೀತಮ್ ಅವರ ಲೇಖನಗಳು ಒಂದು ಮತಕ್ಕೆ ಸೀಮಿತವಾಗದೇ ಎಲ್ಲಾ ಧರ್ಮಕ್ಕೂ ಅನ್ವಯಿಸುತ್ತದೆ. ಇವರ ಬರಹಗಳ ಸಂವೇದನೆ ಸಾಮಾನ್ಯ ಕೂಲಿ ಕಾರ್ಮಿಕರ ಜೀವನದ ನಾಡಿ ಮಿಡಿತ ಎಂದು ಹೇಳಿದರು.
ಹಸ್ತಪ್ರತಿಶಾಸ್ತç ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಅಧ್ಯಕ್ಷತೆ ವಹಿಸಿದರು. ಪ್ರಾಧ್ಯಾಪಕರಾದ ಪ್ರೊ. ಸಿ.ವೆಂಕಟೇಶ, ಡಾ.ಎಂ.ಗೋವಿAದ, ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ, ಸಿಸ್ಟಂ ಅನಾಲಿಸ್ಟ್ ಶಕುಂತಲಾ ಚೌಡಾನಾಯ್ಕ ಇತರರಿದ್ದರು.