ಹಂಪಿಯಲ್ಲಿ ಅಮೆರಿಕ ಸಂಶೋಧಕನ ಅಸ್ತಿ ವಿಸರ್ಜನೆ

9 HPT 5
Published on

ಹೊಸಪೇಟೆ: ಅಮೆರಿಕದ ಪುರಾತತ್ವ ತಜ್ಞ ಹಾಗೂ ಖ್ಯಾತ ಸಂಶೋಧಕ ಜಾನ್ ಮೆರ್ವಿನ್ ಫ್ರಿಟ್ಜ್ (83) ಅವರ ಅಸ್ತಿಯನ್ನು ಹಂಪಿಯ ತುಂಗಭದ್ರಾ ನದಿಯಲ್ಲಿ ಬುಧವಾರ ವಿಸರ್ಜಿಸಲಾಯಿತು.

ಇವರು ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು. ಅವರ ಇಚ್ಛಾನುಸಾರ ಅವರ ಪುತ್ರಿ ಆ್ಯಲಿಸ್, ಮೊಮ್ಮಗ ವಿಲಿಯಂ ಅವರು ಅಮೆರಿಕದ ಸಿಯಾಟಲ್‌ನಿಂದ ಆಗಮಿಸಿ, ಹಿಂದು ಧಾರ್ಮಿಕ ವಿಧಿ-ವಿಧಾನಗಳ ಅನುಸಾರ ಅಸ್ತಿ ವಿಸರ್ಜಿಸಿದರು. ಹಂಪಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಜಾನ್ ಮೆರ್ವಿನ್ ಫ್ರಿಟ್ಜ್, ಪುಸ್ತಕಗಳನ್ನು ಕೂಡ ಬರೆದಿದ್ದರು. 1981 ರಿಂದ ಸತತ ಹಂಪಿಗೆ ಭೇಟಿ ನೀಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net