ಸಕಾಲಕ್ಕೆ ಬಾರದ ಆಂಬುಲೆನ್ಸ್; ಬುಲೆರೊ ವಾಹನದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ತಾಯಿ

Hospet Baby Born in Bulero Vehicle
ಬುಲೆರೊ ವಾಹನದಲ್ಲಿ ಜನಿಸಿದ ಹೆಣ್ಣು ಮಗು.
Published on

ಹೊಸಪೇಟೆ: ಆಂಬುಲೆನ್ಸ್ ಬರುವುದು ತಡವಾದ ಕಾರಣ ಬುಲೆರೊ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಲೂಕಿನ ಕಡ್ಡಿರಾಂಪುರ ಗ್ರಾಮದ ಅಂಜಲಿಬಾಯಿ ಎಂಬುವರಿಗೆ ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬದವರು ಆಂಬುಲೆನ್ಸ್‌ಗೆ ಕರೆ ಮಾಡಿದ್ದು, ಬರುವುದು ತಡವಾಗಿದೆ. ನೋವು ಹೆಚ್ಚಾಗಿದ್ದರಿಂದ ಬುಲೆರೊ ವಾಹನದಲ್ಲಿ ಕರೆದುಕೊಂಡು ನಗರಕ್ಕೆ ಬರುವಾಗ ಅನಂತಶಯನಗುಡಿ ಬಳಿ ಹೆರಿಗೆಯಾಗಿದೆ. ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net