ನಮ್ಮತನ ಅರಿತು ಸಮಾಜ ಸರಿಪಡಿಸಿ

06 MANJU 03
Published on

ಹೊಸಪೇಟೆ: ಬುದ್ದ ಮತ್ತು ಅಂಬೇಡ್ಕರ್ ಅವರು ಆತ್ಮವಂಚನೆ ಮತ್ತು ಸಮುದಾಯ ವಂಚನೆಗಳನ್ನು ತೊರೆದವರು. ಆದರೆ, ಈಗ ನಾವು ಎಷ್ಟೇ ವಿದ್ಯಾವಂತ, ಬುದ್ಧಿವಂತರಾದರೂ ಆತ್ಮವಂಚನೆ ಮತ್ತು ಸಮುದಾಯದ ವಂಚನೆಯನ್ನು ಮಾಡಿಕೊಂಡು ಬಂದಿದ್ದೇವೆ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಕನ್ನಡ ವಿವಿ ಪಂಪ ಸಭಾಂಗಣದಲ್ಲಿ ಶುಕ್ರವಾರ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಹಮ್ಮಿಕೊಂಡಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿದರು.

ನಮ್ಮ ತನವನ್ನು ಮರೆತು, ಮೊದಲು ನಾನು ಸರಿಯಾಗಬೇಕೆಂಬುದನ್ನು ಬಿಟ್ಟು, ಸಮಾಜ ಸರಿಯಾಗಲಿ ಎಂದು ಆಶಿಸುತ್ತಿದ್ದೇವೆ. ಇದು ಸರಿಯಾದ ಆಲೋಚನೆಯಲ್ಲ. ಮೊದಲು ನಾವು ಸರಿಯಾದರೆ, ಸಮಾಜ ತಾನಾಗಿಯೇ ಸರಿಯಾಗುತ್ತದೆ. ಅಂಬೇಡ್ಕರ್ ಅವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಇತರೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಎಂದು ಸಹ ಮಾಸುವುದಿಲ್ಲ ಎಂದರು.

ಕನ್ನಡ ವಿವಿಯ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಮಾತನಾಡಿ, ಅಂಬೇಡ್ಕರ್ ದೇಶದ ಅರ್ಥವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಜನ ಸಮುದಾಯಗಳ ಮತ್ತು ಮಹಿಳೆಯರ ಸ್ಥಾನಮಾನ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಅವರಿಗಿತ್ತು. ಆದರೆ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವಲ್ಲಿ, ಪಾಲಿಸುವಲ್ಲಿ ಹಿಂದುಳಿದ್ದಿದ್ದೇವೆ. ಸಂಶೋಧನೆಗಳಲ್ಲಿ ಮೇಲ್ನೋಟಕ್ಕೆ ಮಾತ್ರ ಅಂಬೇಡ್ಕರ್ ಅವರ ಉಲ್ಲೇಖ ಕಂಡು ಬರುತ್ತಿದ್ದು, ಅವರ ಒಳಗಿನ ಅಂತಃಸತ್ವಗಳ ಬಗ್ಗೆ ಚರ್ಚಿಸಿದ್ದು ತುಂಬಾ ಕಡಿಮೆ. ಇನ್ನು ಮುಂದಾದರೂ ಅಂಬೇಡ್ಕರ್ ಅವರ ವಿಚಾರಗಳನ್ನು, ಚಿಂತನೆಗಳನ್ನು ವರ್ಷವಿಡಿ ಆಳವಾಗಿ ಅಧ್ಯಯನ ಮಾಡುವಂತಾಗಲಿ ಎಂದರು.

ವಿಶ್ರಾAತ ಪ್ರಾಧ್ಯಾಪಕ ಪ್ರೊ.ಮೊಗಳ್ಳಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net