ಜಯಂತಿಯಲ್ಲಿ ಸಚಿವರು ಭಾಗವಹಿಸಲಿ

13 MANJU 02
Published on

ಹೊಸಪೇಟೆ: ನಗರದಲ್ಲಿ ಏ.14ರಂದು ನಡೆಯುವ ಬಾಬಾ ಸಾಹೇಬ್ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿ, ಸರ್ಕಾರ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರಿರುವ ಗಣ್ಯರು ಕಾರ್ಯಕ್ರಮ ಭಾಗವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಯಾವುದೇ ಜಯಂತಿ ಹಾಗೂ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗ ವಹಿಸುತ್ತಿಲ್ಲ. ಆದ್ದರಿಂದ ಈ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಲೇ ಬೇಕು ಎಂದರು.

ಏ14ರAದು ಹಂಪಿಯಿAದ ಜ್ಯೋತಿ ತರಲಾಗುತ್ತದೆ. ಪ್ರಗತಿಪರ ಸಂಘಟನೆಯಯಿAದ ಕಲತಂಡಗಳೊAದಿಗೆ ಮೆರವಣಿಗೆ ನಡೆಯಲಿದೆ. ರಕ್ತದಾನ ಶಿಬಿರ ಹಾಗೂ ಸಂಜೆ ಭೀಮಾ ಗಾಯನ ಸಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಮೀಸಲಾತಿ ಅನುಭವಿಸುತ್ತಿರುವ ಎಲ್ಲ ಸಮುದಾಯ ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಎಂದರು.

ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ಎ.ವೀರಸ್ವಾಮಿ ಮಾತನಾಡಿ, ಮಾದಿಗರ ಪಾಲಿನ ಶೇ.6 ರ ಪ್ರತ್ಯೇಕ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಲಿ. ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿರುವ ಮಾಧುಸ್ವಾಮಿ ವರದಿಯನ್ನು ಜಾರಿಮಾಡಲಿ, ಅಥವಾ ಸದಾಶಿವ ಆಯೋಗದ ದತ್ತಾಂಶ ಬಳಸಿ ಹೊಸ ಆದೇಶ ಮಾಡಲಿ. ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ಆಯಾ ರಾಜ್ಯಗಳಿಗೆ ಪರಮಾಧಿಕಾರವಿದೆ ಎಂದು ಕಳೆದ 2024ರ ಆ.01ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಒಳ ಮೀಸಲಾತಿ ಜಾರಿ ಮಾಡಬೇಕು. ರಾಜ್ಯ ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ, ಮುಂದಿನ ದಿನಗಳಲ್ಲಿ ತಾಲಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ಅಗತ್ಯಬಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಚಿಂತನೆ ನಡೆಸಲಾಗುವುದು ಎಂದರು.

ಕನ್ನಡ ವಿವಿ ಪ್ರಾಧ್ಯಾಪಕ ವೆಂಕಟೇಶ, ಪ್ರಮುಖರಾದ ಜಗನ್, ಕೆ.ಲಕ್ಷಣ್ಮ, ಎಚ್.ಎಸ್.ವೆಂಕಪ್ಪ, ಎಂ.ಸೇಲ್ವA, ವೆಂಕಟೇಶ್ವರಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net