ಗಣ್ಯರ ಜಯಂತಿ ಆಚರಣೆ ಜತೆ ಅನುಕರಣೆ ಆಗಲಿ

14 MANJU 01
Published on

ಹೊಸಪೇಟೆ: ಗೌರವಯುತವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ. ಇದನ್ನು ಪ್ರತಿಯೊಬ್ಬರು ಗೌರವಿಸಲೇಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಆಯೋಜಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಸ್ವತಂತ್ರ ಭಾರತವನ್ನು ಹಸಿವಿನಿಂದ ಕಾಪಾಡಿದ್ದು ಬಾಬು ಜಗಜೀವನ್‌ರಾಂ ಅವರ ಹಸಿರು ಕ್ರಾಂತಿ. ಆಹಾರ ಬೆಳೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ್ದರೆ, ಅದಕ್ಕೆ ಮೂಲ ಕಾರಣಕರ್ತರು ನಮ್ಮ ಜಗಜೀವನರಾಂ. ಇನ್ನೂ ಗ್ರಾಮ ಪಂಚಾಯಿತಿಯ ಸದಸ್ಯರಿಂದ ಹಿಡಿದು ರಾಷ್ಟ್ರಪತಿಯವರೆಗೆ ಸಂವಿಧಾನವನ್ನು ಕೊಟ್ಟವರಿಗೆ ನೆನೆಸಿಕೊಳ್ಳಬೇಕಾಗುತ್ತದೆ. ಅಂಬೇಡ್ಕರ್ ಅವರು ಮನುಕುಲದ ಎಲ್ಲಾ ಆಶಯಗಳನ್ನು ಒಳಗೊಂಡು ಅಂಶಗಳೊAದಿಗೆ ಸಂವಿಧಾನ ಬರೆದರು. ದೇವರ ಕಣ್ಣಲ್ಲಿ ಒಂದಾಗೋಕಿAತ ಮಾನವರಾಗಿ ಒಂದಾಗಿ, ಸಮಾನತೆ ಕಂಡುಕೊಳ್ಳಬೇಕು ಎಂದು ಸಾರಿದ್ದಾರೆ. ಸಂವಿಧಾನದಿAದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸೋಣ. ಆಚರಣೆ ಜತೆ ಅನುಕರಣೆ ಮಾಡಬೇಕು. ಮನುಷ್ಯನ ಸಂಸ್ಕಾರ ಮುಂದಿನ ಪೀಳಿಗೆಗೆ ಅಸ್ಮೀತೆ ಆಗಬೇಕು. ಸಮಾಜದ ಅಭಿವೃದ್ಧಿ ಆಗಬೇಕು ಎಂದರೆ, ಶಿಕ್ಷಣ ಪಡೆಯುವುದು ಅಗತ್ಯ ಎಂದರು.

ಇಲಾಖೆ ಜತೆ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್ ಭಾವಚಿತ್ರದ ಶಾಸಕ ಎಚ್.ಆರ್.ಗವಿಯಪ್ಪ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಬಳ್ಳಾರಿ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಮೇನ್ ಬಜಾರ್, ಡಾ.ಪುನೀತ್ ರಾಜಕುಮಾರ ವೃತ್ತದ ಮಾರ್ಗವಾಗಿ ಕಾಲೇಜು ರಸ್ತೆಯ ಅಂಬೇಡ್ಕರ್ ವೃತ್ತದ ವರೆಗೆ ವಿವಿಧ ಕಲತಂಡಗಳಿAದ ಬೃಹತ್ ಮೆರವಣಿಗೆ ಪಡೆಯಿತು. ಹಂಪಿಯಿAದ ತಂದ ಜ್ಯೋತಿಯನ್ನು ಅಂಬೇಡ್ಕರ್ ಪ್ರತಿಮೆ ಮುಂದೆ ಬೆಳಗಿಸಲಾಯಿತು. ನಂತರ ವೇದಿಕೆಯಲ್ಲಿ ಚಿತ್ರದುರ್ಗದ ಉಪನ್ಯಾಸಕ ಡಾ.ಕೆ.ಆರ್.ಜೆ.ರಾಜಕುಮಾರ, ವಿಎಸ್.ಕೆ ವಿವಿಯ ಪ್ರಾಧ್ಯಾಪಕ ಡಾ.ಎಚ್.ತಿಪ್ಪೇಸ್ವಾಮಿ ಗಣ್ಯರ ಉಪನ್ಯಾಸ ನೀಡಿದರು.

ಹುಡಾ ಅಧ್ಯಕ್ಷ ಎಚ್‌ಎನ್.ಎಫ್.ಇಮಾಮ್ ನಿಯಾಜಿ, ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್.ಶ್ರೀಹರಬಾಬು, ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ, ಗೌರಾವಧ್ಯಕ್ಷ ವೀರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net