ಅಲ್ಲಮಫ್ರಭು ನಾಟಕ ನಾಳೆ

23 MANJU 01
Published on

ಹೊಸಪೇಟೆ: ಮಾಯ ಮದ ಮರ್ಧನ ಅಲ್ಲಮಫ್ರಭು ನಾಟಕ ಪ್ರದರ್ಶನ ನಗರದ ಪಂಪಕಲಾ ಮಂದಿರದಲ್ಲಿ ಯಿಂದ ಮೇ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ರಂಗ ಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ರೇಷ್ಮಾ ಸಿ.ಅಳವಂಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪಕಲಾ ಮಂದಿರದಲ್ಲಿ ಅಂದು ಸಂಜೆ 6.30ಕ್ಕೆ ಇಲಕಲ್ ತಾಲೂಕು ರಂಗ ಸಂಗಮದ 17 ಕಲಾವಿದರು ದಿವಂಗತ ಫಕೀರಪ್ಪ ವಿರಚಿತ ನಾಟಕವನ್ನು ಪ್ರದರ್ಶಿಸಲಿದ್ದಾರೆ. ರಂಗಭೂಮಿ ಪ್ರಸ್ತುತ ವಿನಾಶದ ಅಂಚಿಗೆ ತಲುಪಿದ್ದು ಅದನ್ನು ಪ್ರೋತ್ಸಾಹಿಸಲು ನಮ್ಮ ಸಂಘ ರಾಜ್ಯದ ವಿವಿಧ ಕಡೆ ಪ್ರದರ್ಶನ ನೀಡಿದೆ. ಸದ್ಯ ಮೇ 25ರಂದು ನಗರದಲ್ಲಿ ಪ್ರದರ್ಶನ ಏರ್ಪಡಿಸಿದ್ದು ಕಲಾಪ್ರೇಮಿಗಳು ಪ್ರೋತ್ಸಾಹಿಸಬೇಕು ಎಂದರು.

ಪ್ರಮುಖರಾದ ಲಕ್ಷ್ಮೀ, ಡಾ.ಮಂಟೂರುಮಠ, ಜಯಶ್ರೀ ಪಾಟೀಲ್, ಉಮಾರಾಣಿ ಇರರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net