ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಿ

Hospet AIMS protest
ಹೊಸಪೇಟೆಯಲ್ಲಿ ವಿವಿಧ ಸಂಘಟನೆಗಳಿಂದ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಬೋಡ ರಾಮಪ್ಪ, ಪರಮೇಶ್ವರ ಗೌಡ, ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಕಲಂದರ್, ಗಂಟೆ ಸೋಮಶೇಖರ್ ಇತರರಿದ್ದರು.
Published on

ಹೊಸಪೇಟೆ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಅಧಿಕಾರದ ದಬ್ಬಾಳಿಕೆಗಳು ನಮ್ಮ ಮೇಲೆ ನಿರಂತರವಾಗಿ ನಡೆಯುತ್ತಲೇ ಇದೆ. ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಹುಬ್ಬಳ್ಳಿ-ಧಾರವಾಡದ ಜನತೆ ಯಾವುದೇ ಹೋರಾಟ ಮನವಿಗಳಿಲ್ಲದೇ ಅವರಿಗೆ ಅರಿವಿಲ್ಲದೆಯೇ ಅನೇಕ ಬೃಹತ್ ಯೋಜನೆಗಳು, ಸಂಸ್ಥೆಗಳು ಸ್ಥಾಪನೆಗೊಳ್ಳುತ್ತಿವೆ. ನಾವು ನಿರಂತರ ಹೋರಾಟ ಮಾಡಿದಾಗ್ಯೂ ನಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಯಾವುದೇ ಯೋಜನೆಗಳು ಬರುತ್ತಿಲ್ಲ, ಅಭಿವೃದ್ಧಿ ಕಾಣುತ್ತಿಲ್ಲ. ಇದು ನಮ್ಮ ದೌರ್ಭಾಗ್ಯ.

ರಾಯಚೂರಿನಲ್ಲಿ ನಡೆಸುತ್ತಿರುವ ಧರಣಿ 796ನೇ ದಿನ ಕಳೆದಿದೆ. ಸರ್ಕಾರದ ವಿಳಂಬತನ, ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಲು ಒತ್ತಾಯಿಸಿ ಮೇಲಿಂದ ಮೇಲೆ ಹೋರಾಟಗಳು, ಪ್ರತಿಭಟನೆ, ಧರಣಿ ಹಾಗೂ ಸತ್ಯಾಗ್ರಹಗಳು ನಡೆದಿವೆ. ಏಮ್ಸ್ ಆರೋಗ್ಯ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲೇಬೇಕು. ರಾಜಕೀಯ ಇಚ್ಛಾಶಕ್ತಿಯೊಂದಿಗೆ ಆದಷ್ಟು ಬೇಗ ಅಧಿಸೂಚನೆ ಪ್ರಕಟಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net