ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಾಸಕರಿಂದ ಮನವಿ

20 MANJU 07
Published on

ಹೊಸಪೇಟೆ: ಐತಿಹಾಸಿಕ ವಿಜಯನಗರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಶಾಸಕ ಎಚ್.ಆರ್.ಗವಿಯಪ್ಪ ಬೆಂಗಳೂರಿನಲ್ಲಿ ಶುಕ್ರವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ಗೆ ಭೇಟಿ ಮಾಡಿ ಚರ್ಚಿಸಿದರು.

ವಿಜಯನಗರ ಜಿಲ್ಲೆಯು ಪ್ರಾಕೃತಿಕವಾಗಿ ತನ್ನದೇ ವಿಶೇಷತೆಯನ್ನು ಹೊಂದಿದೆ. ಹಂಪಿಯು ಜಾಗತಿಕವಾಗಿ ಹೆಸರುವಾಸಿಯಾಗಿದೆ. ಪ್ರತಿ ದಿನ ಹಂಪಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸುತ್ತಾರೆ. ಹಂಪಿ ಸುತ್ತಲು ಪ್ರಸಿದ್ಧ ಧಾರ್ಮಿಕ ತಾಣ ಅಂಜನಾದ್ರಿ, ಹುಲಗಿ ತಾಣಗಳಿವೆ. ಮೂರ್ನಾಲ್ಕು ರಾಜ್ಯಗಳಿಗೆ ನೀರುಣಿಸುವ ಜೀವನದಿ ತುಂಗಭದ್ರಾ ಇಲ್ಲಿದೆ.

ಇಂತಹ ವಿಶೇಷತೆಯ ವಿಜಯನಗರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆ ಇದೆ. ಹಾಗೂ ಹಂಪಿ ವ್ಯಾಪ್ತಿಯಲ್ಲಿ ಟೂರಿಸಂ ಪಾರ್ಕ್ ನಿರ್ಮಾಣ ಹಾಗೂ ಹೊಸಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸ್ಟೀಲ್ ಪಾರ್ಕ್ ನಿರ್ಮಾಣಕ್ಕೆ ಸಂಬAಧಿಸಿದAತೆ ಶಾಸಕ ಸಚಿವರಿಗೆ ಮನವರಿಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net