ತೋಟದಲ್ಲಿ ಸೋಲಿನ ಆತ್ಮಾವಲೋಕ ಮಾಡಿಕೊಂಡೆ

news
ಹೊಸಪೇಟೆಯಲ್ಲಿ ಭಾನುವಾರ ನಡೆದ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿದರು.
Published on

ಹೊಸಪೇಟೆ: ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಭಾನುವಾರ ಹಸಿರಿನೊಂದಿಗೆ ಮಾತುಕತೆ ವಾರ್ಷಿಕೋತ್ಸವ - ಕೃಷಿ ಸಾಧಕರ ಕುರಿತ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಶಾಸಕ ಎಚ್.ಆರ್.ಗವಿಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋತ ನಂತರ ನಾನು ನನ್ನ ತೋಟದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡೆ. ಕೃಷಿಕರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅದುವೇ ನನ್ನ ಗೆಲುವಿಗೆ ದಾರಿಮಾಡಿಕೊಟ್ಟಿತು. ನಾನು ಯಾಕೆ ಸೋತೆ ಎಂಬ ಆತ್ಮಾವಲೋಕನ ನನ್ನ ತೋಟದಲ್ಲಿ ನನಗಾಯಿತು. ಕೃಷಿ ತೋಟದ ಸಾಂಗತ್ಯ ನನಗೆ ಒಂದಷ್ಟು ಮಾರ್ಗಗಳನ್ನು ತೋರಿ ಸಿತು. ಅದೇ ಕಾರಣದಿಂದ ರೈತರ ಕಷ್ಟಗಳ ಅರಿವೂ ಆಗಿದೆ. ಮಾಗಣೆ ರಸ್ತೆಗಳ ಸಮಸ್ಯೆ ನೀಗಿಸಿದರೆ ಕಬ್ಬು, ಇತರ ಕೃಷಿ ಉತ್ಪನ್ನಗಳ ಸಾಗಣೆ ವೆಚ್ಚ ತಗ್ಗುತ್ತದೆ, ಹೀಗಾಗಿ ಈ ರಸ್ತೆಗಳ ದುರಸ್ತಿ, ಸುಧಾರಣೆಗೆ ಹೆಚ್ಚಿನ ಗಮನ ಹರಿಸಿದ್ದೇನೆ ಎಂದರು.

ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್, ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಆರ್.ಬದರಿಪ್ರಸಾದ್, ಕಾಲುವೆಗಳ ಆಧುನೀಕರಣ ಯೋಜನೆ ತಂಡದ ನಾಯಕ ಆರ್.ದೊರೆಸ್ವಾಮಿ, ಪ್ರಗತಿಪರ ರೈತ ವಿಶ್ವೇಶ್ವರ ಸಜ್ಜನ್, ತೋಟದ ಮಾಲೀಕ ಬಸಯ್ಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net