ಕೃಷಿಯಿಂದ ಆರ್ಥಿಕ ಸಬಲರನ್ನಾಗಿಸೋಣ

06 MANJU 01
Published on

ಹೊಸಪೇಟೆ: ರೈತರಿಗೆ ಬೇಸಾಯ ಮಾಡಲು ಬೇಕಾದ ಎಲ್ಲ ತರಹದ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ದೊರೆಯುವ ಹಾಗೆ ಮಾಡಿ, ರೈತರನ್ನು ಕೃಷಿಯಿಂದಲೇ ಆರ್ಥಿಕ ಸಬಲರನ್ನಾಗಿ ಮಾಡೋಣ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ತಾಲೂಕಿನ ನಾಗೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವತಂತ್ರ‍್ಯ ಪೂರ್ವದಲ್ಲೆ ಸ್ಥಾಪನೆಯಾದ ಸಹಕಾರ ಸಂಘಗಳು ಪ್ರರಾಂಭದಿAದಲು ಇಲ್ಲಿಯವರೆಗೂ ರೈತರ ಕ್ಷೇಮಾಭಿಲಾಶೆಯನ್ನೆ ತಮ್ಮ ಗುರಿಯನ್ನಾಗಿಸಿಕೊಂಡು ಬಂದಿವೆ.

ರೈತರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರ ಆರ್ಥಿಕ ಜೀವನ ಸುಧಾರಣೆ ಕಾಣುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ರೈತರು ತಾವು ಬೇಳದ ಬೆಳೆಗೆ ತವೇ ಬೆಲೆ ನಿಗದಿ ಮಾಡುವಂತಾಗಬೇಕು. ಇಲ್ಲವಾದರೆ ಮಧ್ಯವರ್ತಿಗಳ ಹಾವಳಿಯಿಂದ ರೈತರ ಆರ್ಥಿಕ ಮಟ್ಟ ಕ್ಷೀಣಿಸಬಹುದು ಎಂದರು.

ಸಹಕಾರ ಸಂಘಗಳಲ್ಲಿ ಇನಷ್ಟು ಹೆಚ್ಚು ಸಾಲ ಸೌಲಭ್ಯ ಒದಗಿಸಬೇಕೆಂದು ರೈತರು ಮನವಿ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ರೈರನರನ್ನು ಆರ್ಥಿಕವಾಗಿ ಸಧೃಡವಾಗಿಸುವ ನಿಟ್ಟಿನಲ್ಲಿ ಸಹಕರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಹೆಚ್ಚು ಸಾಲ ಸೌಲಭ್ಯ ಒದಗಿಸುವ ರೀತಿಯಲ್ಲಿ ಯೋಜನೆಗಳನ್ಮು ರೂಪಿಸಲಾಗುವುದು ಎಂದರು.

ಶಾಸಕ ಎಚ್.ಅರ್.ಗವಿಯಪ್ಪ ಅಧ್ಯಕ್ಷತೆ ವಹಿಸಿದರು. ಕೊಟ್ಟೂರು ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮಿ, ಎಸಿ ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ, ನಗರಗಡ್ಡಿ ಮಠದ ಶಾಂತಲಿAಗೇಶ್ವರ ಸ್ವಾಮಿ ಸಾನಿಧ್ಯವಹಿಸಿದರು. ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ನಿರ್ದೇಶಕ ಚಂದ್ರಶೇಖರಯ್ಯ, ಚೊಕ್ಕ ಬಸವನಗೌಡ, ಸಚಿವರ ಕರ್ತವ್ಯಾಧಿಕಾರಿ ರಾಮಣರೆಡ್ಡಿ, ತಾ.ಪಂ. ಇಒ ಡಿ.ಲಕ್ಷ್ಮಿಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net