ಕಾರು ಅಪಘಾತ ಇಬ್ಬರು ಸಾವು

Untitled-1 copy
Published on

ಹೊಸಪೇಟೆ: ಬೈಕ್ ಮತ್ತು ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಮರಿಯಮ್ಮನಹಲ್ಳಿ ಸಮೀಪದ ದೇವಲಾಪುರದ ಬಳಿಯ ರಾಷ್ಟಿçÃಯ ಹೆದ್ದಾರಿಯಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.

ತಾಲೂಕಿನ ದೇವಲಾಪುರ ಗ್ರಾಮದ ಸಣ್ಣ ಹನುಮಂತಪ್ಪ (42), ಕೊಪ್ಪಳ ಜಿಲ್ಲೆಯ ಕುಷ್ಟಗಿ ಯಮನೂರು (20) ಮೃತ ದುರ್ಧೈವಿಗಳು. ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಬಳ್ಳಾರಿ ವಿಮ್‌ಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಯಮನೂರು ರಾತ್ರಿಯೇ ಮೃತಪಟ್ಟರೆ, ಸಣ್ಣಹನುಮಂತಪ್ಪ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ ರೊಚ್ಚಿಗೆದ್ದು ಸ್ಥಳೀಯರು ರಾಷ್ಟಿçÃಯ ಹೆದ್ದಾರಿ 50 ಕೆಲಹೊತ್ತು ಬಂದ್ ಮಾಡಿದ ಆಗ್ರಹಿಸಿದರು. ಫ್ಲೈವೋವರ್ ಮತ್ತು ಸರ್ವಿಸ್ ನಿರ್ಮಿಸುವಂತೆ ಪಟ್ಟು ಹಿಡಿದರು. ವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಅಪಘಾತಗಳು ಆಗುತ್ತಿವೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಇದೇ ಸ್ಥಳದಲ್ಲಿ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದರು ಎಂದು ಆಗ್ರಹಿಸಿದರು. ಗ್ರಾಮಸ್ಥರನ್ನ ಪೊಲೀಸರು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net