ಹೊಸಪೇಟೆ: ಅಪರಿಚಿತ ವಾಹನ ಹಿಟ್ ಅಂಡ್ ರನ್ ಮಾಡಿದ ಹಿನ್ನೆಲೆ ಬೈಕ್ ಸವಾರರಾದ ನಗರದ ನಿವಾಸಿ ಪಾಷಾವಲಿ (53) ಸಮಿವುಲ್ಲಾ (60) ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಮರಿಯಮ್ಮನಹಳ್ಳಿಯ ರಾಷ್ಟಿçÃಯ ಹೆದ್ದಾರಿ 50ರ ತಾಲೂಕಿನ ಗಾಳೆಮ್ಮನ ಗುಡಿಯ ಬಳಿ ಘಟನೆ ನಡೆದಿದೆ.
ಹೂವಿನ ಹಡಗಲಿಗೆ ಹೋಗಿ ವಾಪಾಸ್ ಬರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನವನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ದೂರು ದಾಖಲಿಸಲಾಗಿದೆ.