ರಸ್ತೆ ಅಪಘಾತ ತಡೆಗೆ ಕ್ರಮಕೈಗೊಳ್ಳಿ

news
ಕನ್ನಡ ವಿವಿ ಬಳಿ ಆಗುತ್ತಿರುವ ಅಪಘಾತ ತಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಯಿತು.
Published on
  • ಕನ್ನಡ ವಿವಿ ಬಳಿ ವಿದ್ಯಾರ್ಥಿಗಳಿಂದ ದಿಢೀರ್ ರಸ್ತೆ ತಡೆ ಪ್ರತಿಭಟನೆ

ಹೊಸಪೇಟೆ: ಕನ್ನಡ ವಿವಿ ಬಳಿ ಆಗುತ್ತಿರುವ ಅಪಘಾತ ತಡೆಯಬೇಕು ಎಂದು ಆಗ್ರಹಿಸಿ ವಿವಿಯ ಬಿ.ಗೇಟ್ ಬಳಿ ವಿದ್ಯಾರ್ಥಿಗಳಿಂದ ಸೋಮವಾರ ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಯಿತು.

ವಿವಿಯ ಕಲಾ ವಿಭಾಗದ ವಿದ್ಯಾರ್ಥಿನಿ ಗೌರಮ್ಮ (24)ಗೆ ಸರ್ಕಾರಿ ಬಸ್‌ನಿಂದ ಅಪಘಾತವಾಗಿದ್ದು, ಕೈಗೆ ಬಲವಾಗಿ ಪೆಟ್ಟುಬಿದ್ದಿದೆ. ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಹೆಚ್ವಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ರವಾನಿಸಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ವಿವಿ ಬಳಿ ಪದೇ ಪದೇ ಅಪಘಾತಗಳಾಗುತ್ತಿದ್ದು ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಸ್ತೆಯಲ್ಲಿ ಯಾವುದೇ ಸೂಚಕ ಫಲಕಗಳಿಲ್ಲದೆ ವಾಹನಗಳ ವೇಗಕ್ಕೆ ಮಿತಿ ಇಲ್ಲದಂತಾಗಿದೆ. ಕನ್ನಡ ವಿಶ್ವವಿದ್ಯಾಲಯ, ಕಸ್ತೂರಿ ಬಾ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳು ಸೇರಿದಂತೆ ಇತರೆ ಜನವಸತಿ ಪ್ರದೇಶಗಳಿವೆ. ರಸ್ತೆಯಲ್ಲಿ ವೇಗದ ತಡೆ, ಸೂಚನಾ ಫಲಕಗಳು, ಹಾಕಬೇಕು ಎಂದು ಹಲವು ಬಾರಿ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೆಷ್ಟು ಪ್ರಾಣಗಳು ತೆಗೆದುಕೊಳ್ಳುತ್ತಾರೋ ಎಂಬ ಆತಂಕವಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕನ್ನಡ ವಿವಿ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಂಬAಧಪಟ್ಟ ಅಧಿಕಾರಿಗಳ ಗಮನ ಕ್ಕೆ ತಂದು ಒಂದು ವಾರದೊಳಗೆ ಕ್ರಮ ಕೈಗೊಳ್ಳುತ್ತವೆ ಎಂದು ವಿದ್ಯಾರ್ಥಿಗಳ ಮನವೊಲಿಸಿದರು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಧರಣಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿ, ಪ್ರತಿಭಟನೆ ಮೊಟಕುಗೊಳಿಸಿದರು.

ವಿವಿಯ ವಿದಾರ್ಥಿಗಳು ದೊಡ್ಡ ಬಸವರಾಜ್, ನರಸಿಂಹರಾಜಲು, ಮಣಿಕಂಠ ಹಂಗಳ, ಅನಿಲ್‌ಕುಮಾರ್, ಪಂಪಾಪತಿ, ಚೌಡಪ್ಪ, ವಿಷ್ಟು, ಹನುಮಂತ, ಅಶೋಕ ನಡುವಿನ ಮನಿ, ಸುನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net