

ಹೊಸಪೇಟೆ: ಮಾನವ ಸಮಾಜಕ್ಕೆ ಕಳಂಕಪ್ರಾಯವಾದ ರಸ್ತೆ ಅಪಘಾತಗಳು ಸಂಭವಿಸಿದಂತೆ ವಿಜಯನಗರ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆ ಸುರಕ್ಷತಾ ಸಮಿತಿ ಸಭೆಗಳು ಇನ್ಮುಂದೆ ಸಹ ನಿಯಮಿತವಾಗಿ ನಡೆಯಬೇಕು. ಸಭೆಯಲ್ಲಿ ರ‍್ಚಿಸಿದಂತೆ ಬೇಗನೇ ಕರ‍್ಯಪ್ರವೃತ್ತರಾದಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದರು.
ವಿಜಯನಗರ ಜಿಲ್ಲೆ ಐತಿಹಾಸಿಕ ಹಾಗೂ ಜಾಗತಿಕ ಮಾನ್ಯತೆ ಹೊಂದಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ-50 ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಎನ್‌ಹೆಚ್-63 ಹೊಸಪೇಟೆ-ಬಳ್ಳಾರಿ ಪ್ರಮುಖ ರಸ್ತೆಯಾಗಿದೆ. ರಾಷ್ತ್ರೀಯ, ರಾಜ್ಯ ಹೆದ್ದಾರಾಷ್ಟ್ರೀಯಜಿಲ್ಲೆಯಲ್ಲಿನ ಎಲ್ಲಾ ರಸ್ತೆಗಳ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಅಪಘಾತ ವಲಯಗಳನ್ನು ಗುರುತಿಸಿ, ವೇಗ ನಿಯಂತ್ರಣ ಮಾಡಲು ಕ್ರಮ ವಹಿಸಬೇಕು ಎಂದರು. ರಸ್ತೆಗಳನ್ನು ಅವೈಜ್ಞಾನಿಕವಾಗಿ ನರ‍್ಮಿಸಬಾರದು. ಸೂಕ್ತವಾದ ಕಡೆಗಳಲ್ಲಿ ಮಾತ್ರ ಬ್ಯಾರಿಕೇಡಗಳನ್ನು ಅಳವಡಿಸಿ ಅಪಘಾತಗಳ್ನು ತಪ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ-50ರಲ್ಲಿನ ರ‍್ವಿಸ್ ರೋಡ್‌ಗಳ ನೀಮರ‍್ಣ ಮಾಡುವಂತೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ನರ‍್ಲಕ್ಷ್ಯ ವಹಿಸಿದಲ್ಲಿ ನರ‍್ಧಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ಇನ್ನೂ ರಾಷ್ಟ್ರೀಯ ಹೆದ್ದಾರಿ-63 ಆಮೆವೇಗದಲ್ಲಿ ನಡೆಯುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಹೊಸಪೇಟೆ ಮತ್ತು ಬಳ್ಳಾರಿಯಂತಹ ಪ್ರಮುಖ ನಗರಗಳ ಅಸಂಖ್ಯೆ ಜನರು ನರಕಯಾತನೆ ಅನುಭವಿಸಿ ನಿತ್ಯ ಸಂಚರಿಸುವಂತಹ ದುಸ್ಥಿತಿಯಿದೆ. ಈ ರಸ್ತೆಯ ನಿರ್ಮಾಣದ ಹೊಣೆಹೊತ್ತ ಗುತ್ತಿಗೆದಾರರು ಇದನ್ನು ಅರಿಯಬೇಕು. ಪೊಲೀಸ್ ಭದ್ರತೆ ಅಷ್ಟೇ ಅಲ್ಲ ಏನೇ ಇದ್ದರೂ ಜಿಲ್ಲಾಡಳಿತ ಸಹಕಾರ ನೀಡಲಿದ್ದು ಈ ರಸ್ತೆ ದುರಸ್ತಿ ಕರ‍್ಯವು ಬೇಗನೆ ಪರ‍್ಣವಾಗಲು ಕ್ರಮ ವಹಿಸಬೇಕು ಎಂದು ಕಟ್ಟುನಿಟ್ಟಿನ ನರ‍್ದೇಶನ ನೀಡಿದರು.