ಅಪಘಾತದಲ್ಲಿ ಸಿಲುಕಿದ ಚಾಲಕನ ರಕ್ಷಣೆ

27 MANJU 14
Published on

ಹೊಸಪೇಟೆ: ಅಪಘಾತದಲ್ಲಿ ಸಿಲುಕಿದ ಚಾಲಕನ್ನು ಪೊಲೀಸರು ಹಾಗೂ ಸ್ಥಳೀಯರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ಗೊಲ್ಲರಹಳ್ಳಿ ಕ್ರಾಸ್ ಬಳಿ‌ ಶುಕ್ರವಾರ ನಡೆದಿದೆ.

ರಾಷ್ತ್ರೀಯ ಹೆದ್ದಾರಿ  50ರಲ್ಲಜ ತಾಲೂಕಿನ ಗೊಲ್ಲರಹಳ್ಳಿ ಕ್ರಾಸ್ ಹತ್ತಿರ ನಿಂತಿದ್ದ ಲಾರಿಯೊಂದಕ್ಕೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಗರಿಬೊಮ್ಮನಹಳ್ಳಿ ತಾಲೂಕಿನ ಚಾಲಕ ಉಪ್ಪಾರ ಅಮರೇಶ್ ಕ್ಯಾಬಿನ್ ನಲ್ಲಿ ಸಿಲುಕಿಕೊಂಡಿದ್ದ. ಹಗರಿಬೊಮ್ಮನಹಳ್ಳಿ ಪಿಐ ವಿಕಾಸ್ ಲಮಾಣಿ, ಮರಿಯಮ್ಮನಹಳ್ಳಿ ಪಿಎಸ್ ಐ ತಾರಾಬಾಯಿ ನೇತೃತ್ವದಲ್ಲಿ ಸತತ ಎರಡು ಗಂಟೆಗೂ ಅಧಿಕ ಕಾಲ ರಕ್ಷಣ ಕಾರ್ಯ ನಡೆಸಿ ಹೊರ ತೆಗೆಯಲಾಯಿತು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾಲಿನ ಭಾಗಕ್ಕೆ ಗಾಯವಾಗಿದ್ದು ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರಕ್ಷಣಾ ಕಾರ್ಯಚರಣೆಯಲ್ಲಿ ಪಂಜಾಬ್ ನ ಅಮ್ರಿಕ್ ಸಿಂಗ್ ಎಂಬ ಚಾಲಕ ರಕ್ಷಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಗೌರವಿಸಿಲಾಯಿತು ಎಂದು ಪೊಲೀಸರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net